anomaly ಅನಾಮಲಿ
ನಾಮವಾಚಕ
  1. ಅಸಾಮಂಜಸ್ಯ; ಅಸಂಗತತೆ; ಅಸಂಗತಿ; ಅಸಂಬದ್ಧತೆ; ವೈಷಮ್ಯ.
  2. ವ್ಯತಿಕ್ರಮ; ವೈಪರೀತ್ಯ; ಸಾಮಾನ್ಯ ನಿಯಮಕ್ಕೆ ವಿರುದ್ಧವಾಗಿರುವುದು.
  3. ಅಸಂಗತ(ವಾದದ್ದು): a bird that cannot fly is an anomaly ಹಾರಲಾಗದ ಹಕ್ಕಿ ಒಂದು ಅಸಂಗತ.
  4. (ಖಗೋಳ ವಿಜ್ಞಾನ) ಕೋನದೂರ; ಕೋನಾಂತರ; ಸೂರ್ಯಕೇಂದ್ರಕ್ಕೆ ಅನ್ವಯಿಸಿದಂತೆ ಒಂದು ಗ್ರಹಕ್ಕೂ, ಅದರ ಸೌರ ನೀಚ ಬಿಂದುವಿಗೂ ಇರುವ ಕೋನದೂರ; ಸೌರ ನೀಚ ಬಿಂದುವಿಗೂ ಸೂರ್ಯನನ್ನು ಸೇರಿಸುವ ಸರಳರೇಖೆಗೂ ಇರುವ ಕೋನ.