angel ಏಂಜಲ್‍
ನಾಮವಾಚಕ
  1. ದೇವದೂತ.
  2. ಮನೋಹರವಾದ ಯಾ ನಿಷ್ಕಲಂಕ ವ್ಯಕ್ತಿ.
  3. ಉಪಕಾರಿ; ದಯಾಶೀಲ.
  4. (ಅಶಿಷ್ಟ) ಧನ ಪ್ರೋತ್ಸಾಹಿ; ಹಣ ಸಹಾಯಮಾಡಿ (ಮುಖ್ಯವಾಗಿ ನಾಟಕದ) ಉದ್ಯಮಕ್ಕೆ ಬೆಂಬಲ ಕೊಡುವವನು.
  5. ಏಂಜಲ್‍; ಇಂಗ್ಲಂಡಿನ ಹಳೆಯ ಒಂದು ಚಿನ್ನದ ನಾಣ್ಯ.
  6. ದೇವತೆ; ದೇವರ–ಪರಿಚಾರಕ, ಅನುಚರ, ಸೇವಕ.
  7. (ರಾಷ್ಟ್ರ ಮೊದಲಾದವುಗಳ) ರಕ್ಷಕ ದೇವತೆ.
  8. ಸ್ವರ್ಗಸ್ಥ(ವ್ಯಕ್ತಿ); ಸತ್ತ ನಂತರ ಅವನ ಆತ್ಮ ಇದೆ ಎಂದು ನಂಬಲಾದ ವ್ಯಕ್ತಿ.
  9. ಒಂಬತ್ತು ದೇವದೂತ ವರ್ಗಗಳಲ್ಲಿ ಕೊನೆಯದು.
  10. ಅನಿರ್ವಚನೀಯ ರಾಡಾರ್‍ ಪ್ರತಿ ಧ್ವನಿ; ವಿವರಿಸಲು ಬಾರದ ರಾಡಾರ್‍ ತರಂಗದ ಪ್ರತಿಫಲನ, ಎದುರುಲಿ.
ಪದಗುಚ್ಛ
  1. angel of death ಮೃತ್ಯುದೇವತೆಯ ದೂತ; ಯಮದೂತ.
  2. angels on-horse-back ಹಂದಿಮಾಂಸದಲ್ಲಿ ಸಿಂಪಿಗಳನ್ನು ಹುದುಗಿಸಿ ಮಾಡಿದ ಒಂದು ಭಕ್ಷ್ಯ.
  3. devils on-horse-back = ಪದಗುಚ್ಛ\((2)\).
  4. evil angel ದುಷ್ಟ ದೇವತೆ; ಕೆಟ್ಟದೇವತೆ.
  5. good angel ಭಾಗ್ಯ ದೇವತೆ; ಒಳ್ಳೆಯ ದೇವತೆ.
  6. guardian angel ಕಾಯುವ ದೇವತೆ; ರಕ್ಷಕ ದೇವತೆ.
ನುಡಿಗಟ್ಟು
  1. angel’s visits ದೇವತೆ ಭೇಟಿ; ಅಪೂರ್ವ ದರ್ಶನ; ಅಪರೂಪ ಭೇಟಿ ಯಾ ಸಮಾಗಮ; ವಿರಳವಾದ ಮತ್ತು ಸ್ವಲ್ಪವೇ ಕಾಲಾವಕಾಶದ ಭೇಟಿ ಯಾ ಸಮಾಗಮ.
  2. entertain an angel unawares ಪ್ರಮುಖ್ಯ ವ್ಯಕ್ತಿ ಎಂಬುದನ್ನು ಅರಿಯದೆ ಒಬ್ಬನನ್ನು ಸತ್ಕರಿಸು.
  3. on the side of the angels ದೇವತಾಪಕ್ಷದ; ಯಾವುದೇ ಸಮಸ್ಯೆಯ ಬಗ್ಗೆ ಹಿತವಾದ ಯಾ ಧಾರ್ಮಿಕವಾದ ದೃಷ್ಟಿಯ, ಅಭಿಪ್ರಾಯದ ಪರವಾಗಿರುವ; ಕೊನೆಯಲ್ಲಿ ಧರ್ಮವೇ ಗೆಲ್ಲುವುದೆಂದು ನಂಬಿರುವ.