and ಅಂಡ್‍, ಅನ್‍, ಸ್ವರಾಘಾತವಿರುವಾಗ ಆಂಡ್‍
ಸಂಯೋಜಕಾವ್ಯಯ
  1. (ಒಟ್ಟಿಗೆ ಗ್ರಹಿಸಬೇಕಾದ ಪದಗಳು, ವಾಕ್ಯಭಾಗಗಳು ಮತ್ತು ವಾಕ್ಯಗಳನ್ನು ಕೂಡಿಸುವ) ಮತ್ತು; ಹಾಗು: -ಊ: he and his son ಅವನೂ ಅವನ ಮಗನೂ.
  2. ಕ್ರಮಕ್ರಮವಾಗಿ: better and better ಕ್ರಮಕ್ರಮವಾಗಿ ಉತ್ತಮಗೊಂಡು.
  3. ದೀರ್ಘಕಾಲ; ಬಹಳ ಹೊತ್ತು: she cried and cried ಅವಳು ಬಹಳ ಹೊತ್ತು ಅತ್ತಳು.
  4. ಉಳಿದವು; ಮಿಕ್ಕವು: and all ಉಳಿದೆಲ್ಲವೂ.
  5. ಅನೇಕ; ಬಹಳ: miles and miles ಅನೇಕ ಮೈಲಿಗಳು.
  6. ಮತ್ತೆ ಮತ್ತೆ; ತಿರುಗಿ ತಿರುಗಿ; ಪುನಃ ಪುನಃ: the dog barked and barked ನಾಯಿ ಮತ್ತೆಮತ್ತೆ ಬೊಗಳಿತು.
  7. ಅದೇ ಸಮಯದಲ್ಲಿ; ಏಕಕಾಲದಲ್ಲಿ; ಆಗಲೇ; ಜೊತೆಗೇ: they walked and talked ಅವರು ನಡೆಯುತ್ತಲೇ ಮಾತಾಡಿದರು.
  8. ಜೊತೆಗೆ; ತರುವಾಯ; ಆಮೇಲೆ; ಅನಂತರ; ಬಳಿಕ (ಕ್ರಿಯೆ ಮುಂದುವರಿಯುವುದನ್ನು ಸೂಚಿಸಲು ವಾಕ್ಯದ ಪ್ರಾರಂಭದಲ್ಲಿ ಸಹ): and he said to Moses ಬಳಿಕ ಅವನು ಮೋಸೆಸಿಗೆ ಹೇಳಿದ. he read for an hour and went to bed ಅವನು ಒಂದು ಗಂಟೆ ಓದಿ ಅನಂತರ ಮಲಗಿದ.
  9. ಅದೇ ಸಮಯಕ್ಕೆ; ಜೊತೆಗೆ; ಕೂಡ; ಸಹ; ಹಾಗೂ: it is an interesting and instructive book ಅದು ಸ್ವಾರಸ್ಯಕರ ಹಾಗೂ ಬೋಧಪ್ರದವಾದ ಪುಸ್ತಕ.
  10. ಅಂತೆಯೇ; ಹಾಗೆಯೇ: nice and warm ಸೊಗಸಾಗಿ ಅಂತೆಯೇ ಬೆಚ್ಚಗೆ; ಸೊಗಸಾಗಿಯೂ ಬೆಚ್ಚಗೂ.
  11. ನಾನಾ ಬಗೆ; ತರತರಹ; ತರಾವರಿ; ಬಗೆಬಗೆ; ವಿಧವಿಧ; ಅನೇಕ ವಿಧ ಎಂಬುದನ್ನು ತೋರಿಸುವಾಗ: there are men and men ಬಗೆಬಗೆಯ ಜನರಿದ್ದಾರೆ.
  12. (ಎರಡು ಪೂರ್ಣ ಕ್ರಿಯಾಪದಗಳ ನಡುವೆ ‘to’ ಗೆ ಬದಲಾಗಿ) -ಲು: try and come ಬರಲು ಪ್ರಯತ್ನಿಸು.
  13. (ಪ್ರಾಚೀನ ಪ್ರಯೋಗ) ರೆ; ಆದರೆ: and you please ನಿಮಗೆ ಇಷ್ಟವಾದರೆ.
  14. ಒತ್ತಿ ಹೇಳುವುದಕ್ಕೆ: he and he alone can do it ಅವನೊಬ್ಬ ಮಾತ್ರ ಅದನ್ನು ಮಾಡಬಲ್ಲ.
  15. ಆಧಿಕ್ಯವಾಚಕವಾಗಿ: raining good and hard ಬಹಳ ಬಿರುಸಾಗಿ ಮಳೆ ಬೀಳುತ್ತಿದೆ. I am good and angry ನನಗೆ ಬಹಳ ಸಿಟ್ಟು ಬಂದಿದೆ.
  16. ಎಚ್ಚರಿಕೆ ಕೊಡುವಾಗ: stir, and you are a dead man ಕದಲಿದೆಯೋ ಸತ್ತೆ; ಕದಲಿ ನೋಡು, ನೀ ಸತ್ತೆ.
ಪದಗುಚ್ಛ
  1. and/or ಉಕ್ತವಾಗಿರುವುದರಲ್ಲಿ ಒಂದನ್ನೋ ಯಾ ಎರಡನ್ನೋ ಗ್ರಹಿಸಲು ಓದುಗ ಯಾ ಕೇಳುಗನಿಗೆ ಅವಕಾಶ ಕೊಡುವ ಸೂತ್ರ ಪ್ರಯೋಗ: A and/or B ಎ ಯಾ ಬಿ ಯಾ ಎರಡೂ. contributions in money and/or garments ಹಣ ಯಾ ಬಟ್ಟೆಗಳು ಯಾ ಎರಡೂ ಬಗೆಯ ವಂತಿಗೆಗಳು.
  2. and so forth
    1. (ಅದೇ ಬಗೆಯ ಇತರ ವಿಷಯ ಮೊದಲಾದವನ್ನು ಸೂಚಿಸುವಲ್ಲಿ) ಇತ್ಯಾದಿ; ಮುಂತಾದ.
    2. ನಿರೀಕ್ಷಿಸುವಂತೆ; ಉಳಿದವುಗಳೊಡನೆ: one, three, five, seven and so forth ಒಂದು, ಮೂರು, ಐದು, ಏಳು, ಅಂತೆಯೇ ಉಳಿದವು.
  3. and so on = ಪದಗುಚ್ಛ\((2)\).
  4. four and twenty ಇಪ್ಪತ್ನಾಲ್ಕು.
  5. there are books and books ಅಲ್ಲಿ ಹಲವು ಬಗೆಯ ಪುಸ್ತಕಗಳಿವೆ: ಒಳ್ಳೆಯ ಹಾಗೂ ಕೆಟ್ಟ ಪುಸ್ತಕಗಳಿವೆ.
  6. two and ten pence ಎರಡು ಪೌಂಡು ಮತ್ತು ಎರಡು ಪೆನ್ನಿ (= two pound ten).
  7. two and two
    1. ಎರಡಕ್ಕೆ ಎರಡು ಸೇರಿಸಿದ್ದು.
    2. ಎರಡೆರಡಾಗಿ (ವರಸೆಯಿಂದ).