analogist ಅನ್ಯಾಲಜಿಸ್ಟ್‍
ನಾಮವಾಚಕ
  1. ಸಾದೃಶ್ಯಕಾರ; ಸಾದೃಶ್ಯಗಳನ್ನು ಬಳಸುವವ.
  2. ಹೋಲಿಕೆ ಹುಡುಕುವವ; ಸಾದೃಶ್ಯಾನ್ವೇಷಿ.
  3. ಸಾದೃಶ್ಯವಾದಿ; ಮನಸ್ಸಿನ ಭಾವನೆಗಳಿಗೂ ಅವನ್ನು ಸೂಚಿಸುವ ಪದಗಳಿಗೂ ಸಾದೃಶ್ಯವಿದೆ ಎಂದು ವಾದಿಸುತ್ತಿದ್ದ ಕ್ರಿಸ್ತಪೂರ್ವಎರಡನೆಯ ಶತಮಾನದ ಕೆಲವು ಗ್ರೀಕ್‍ ವೈಯಾಕರಣಿಗಳ ಪಂಥಕ್ಕೆ ಸೇರಿದವ.
  4. ದೃಷ್ಟಾಂತವಾದಿ; ದೃಷ್ಟಾಂತದ ಯಾ ಸಾದೃಶ್ಯದ ಆಧಾರವನ್ನು ಅವಲಂಬಿಸಿ ವಾದ ಮಾಡುವವ.