amphitheatre ಆಂಫಿತಿಅ(ಎ)ಟರ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  1. ವರ್ತುಲ ಕ್ರೀಡಾರಂಗ; ಸಭಿಕರು ಕುಳಿತುಕೊಳ್ಳಲು ವರ್ತುಲ ಸೋಪಾನಪಂಕ್ತಿಗಳುಳ್ಳ, ಮುಖ್ಯವಾಗಿ ಪ್ರಾಚೀನ ರೋಮನರ, ಕ್ರೀಡಾರಂಗ. Figure: amphitheatre-1
  2. ಚಂದ್ರಾಂಗಣ: ನಾಟಕಶಾಲೆ ಮೊದಲಾದವುಗಳಲ್ಲಿ ಅರ್ಧವರ್ತುಲಾಕಾರವಾಗಿ ರಚಿಸಿದ ಆಸನಗಳ ಏರುಸಾಲು, ಸೋಪಾನಪಂಕ್ತಿ.
  3. ವರ್ತುಲರಂಗ; ವರ್ತುಲರಂಗವನ್ನು ಹೋಲುವ ಯಾವುದೇ ಕಟ್ಟಡ, ರಂಗಸ್ಥಳ, ಬಟ್ಟ ಬಯಲು, ಮೊದಲಾದವು.
  4. ಅಖಾಡ; ಕುಸ್ತಿಕಣ; ಮಲ್ಲರಂಗ; ಸ್ಪರ್ಧಾರಂಗ (ರೂಪಕವಾಗಿ ಸಹ).