See also 2ambidexter
1ambidexter ಆಂಬಿಡೆಕ್ಸ್‍ಟರ್‍
ಗುಣವಾಚಕ
  1. ಇಕ್ಕೈಯ; ಬಲಗೈಯಷ್ಟೇ ಕುಶಲವಾಗಿ ಎಡಗೈಯನ್ನು ಬಳಸಬಲ್ಲ.
  2. (ರೂಪಕವಾಗಿ) ಉಭಯ ಸಮರ್ಥನಾದ; ಎರಡು ಮಾಧ್ಯಮಗಳನ್ನು (ಉದಾಹರಣೆಗೆ ಗದ್ಯ ಮತ್ತು ಪದ್ಯ) ಬಳಸಬಲ್ಲ.
  3. ವಂಚನೆಯ; ದಗಲ್‍ಬಾಜಿತನದ; ಎರಡು ಪಕ್ಷಗಳಿಂದಲೂ ಲಂಚ ಯಾ ಹೀಜು ತೆಗೆದುಕೊಳ್ಳುವ.
See also 1ambidexter
2ambidexter ಆಂಬಿಡೆಕ್ಸ್‍ಟರ್‍
ನಾಮವಾಚಕ
  1. ಇಕ್ಕೈಪಟು; ಇಕ್ಕೈಕುಶಲಿ; ದ್ವಿಬಾಹುಪಟು; ಉಭಯ ಹಸ್ತಕುಶಲಿ; ಎರಡು ಕೈಗಳನ್ನೂ ಅಷ್ಟೇ ಕುಶಲವಾಗಿ ಉಪಯೋಗಿಸಬಲ್ಲವ.
  2. (ರೂಪಕವಾಗಿ) ಉಭಯ ಸಮರ್ಥ; ಎರಡೂ ಮಾಧ್ಯಮಗಳಲ್ಲಿ (ಉದಾಹರಣೆಗೆ ಗದ್ಯ ಮತ್ತು ಪದ್ಯ) ಕುಶಲ, ಸಮರ್ಥ.
  3. ವಂಚಕ; ದಗಲ್‍ಬಾಜಿ; ಮೋಸಗಾರ; ಎರಡು ಕಡೆಗಳಿಂದಲೂ ಹಣ ತೆಗೆದುಕೊಳ್ಳುವವ.