amalgam ಅಮ್ಯಾಲ್ಗಮ್‍
ನಾಮವಾಚಕ
  1. (ರಸಾಯನವಿಜ್ಞಾನ) ಪಾರದ ಮಿಶ್ರಲೋಹ; ಯಾವುದೇ ಲೋಹ ಮತ್ತು ಪಾದರಸಗಳ ಮಿಶ್ರಣ: gold amalgam ರಸ ಬಂಗಾರ; ಪಾದರಸ ಮಿಶ್ರಿತ ಚಿನ್ನ.
  2. (ಯಾವುದೇ ವಿಭಿನ್ನ ದ್ರವ್ಯಗಳ) ಬೆರಕೆ; ಮಿಶ್ರಣ; ಸಮ್ಮಿಶ್ರಣ(ರೂಪಕವಾಗಿ ಸಹ): an amalgam of wisdom and nonsense ವಿವೇಕ ಮತ್ತು ಅವಿವೇಕಗಳ ಮಿಶ್ರಣ.