allow ಅಲೌ
ಸಕರ್ಮಕ ಕ್ರಿಯಾಪದ
  1. (ಸರಿಯೆಂದು ಯಾ ನಿಜವೆಂದು) ಒಪ್ಪಿಕೊ; ಅಂಗೀಕರಿಸು; ಸಮ್ಮತಿಸು: he will not allow that we have won ನಾವು ಗೆದ್ದೆವೆಂದು ಅವನು ಒಪ್ಪುವುದಿಲ್ಲ.
  2. ಎಡೆಗೊಡು; ಆಗಗೊಡು; ಅವಕಾಶ ಕೊಡು: this chimney allows heated air to escape ಈ ಚಿಮಣಿ ಬಿಸಿಗಾಳಿಗೆ ಹೋಗಲು ಅವಕಾಶ ಕೊಡುತ್ತದೆ.
  3. (ಆತ್ಮಾರ್ಥಕ) ಕೊಟ್ಟುಕೊ; (ಯಾವುದೇ ಒಂದನ್ನು ಮಾಡಲು ಯಾ ಒಂದರಲ್ಲಿ ತೊಡಗಿರಲು) ಅವಕಾಶ ನೀಡಿಕೊ: she did not allow herself any sweets ಅವಳು ಯಾವುದೇ ಸಿಹಿತಿಂಡಿಗಳನ್ನು ತಿನ್ನಲಿಲ್ಲ (ತಿನ್ನಲು ತನಗೆ ಅವಕಾಶ ಕೊಟ್ಟುಕೊಳ್ಳಲಿಲ್ಲ).
  4. ಅನುಮತಿಸು; ಒಪ್ಪಿಗೆ ಕೊಡು; ಸಮ್ಮತಿಸು: I allowed him to go out ಆತ ಹೊರಗೆ ಹೋಗಲು ಒಪ್ಪಿಗೆ ಕೊಟ್ಟೆ.
  5. (ಪಾಲು, ಹಕ್ಕು, ಹಣ, ಮೊದಲಾದವುಗಳನ್ನು) ಕೊಡು; ನೀಡು: I allowed him ten rupees a month ಆತನಿಗೆ ತಿಂಗಳಿಗೆ ಹತ್ತು ರೂಪಾಯಿ ಕೊಟ್ಟೆ.
  6. ಬಿಡು; ಬಿಟ್ಟುಕೊಡು; ರಿಯಾಯಿತಿ ತೋರಿಸು; ಸೋಡಿ ಬಿಡು: I allow 5% on cash payement ನಗದು ಕೊಟ್ಟರೆ ನೂರಕ್ಕೆ ಐದರಂತೆ ಸೋಡಿ ಬಿಡುತ್ತೇನೆ.
  7. (ಯಾವುದನ್ನೇ ಪರಿಗಣಿಸುವಾಗ) ಕೂಡು ಯಾ ಕಳೆ; ಸೇರಿಸು ಯಾ ತೆಗೆ: allow an hour for lunch ಉಪಾಹಾರಕ್ಕೆ ಒಂದು ಗಂಟೆ ತೆಗೆ.
  8. (ಅಮೆರಿಕನ್‍ ಪ್ರಯೋಗ) ಪರಿಗಣಿಸು.
  9. (ಅಮೆರಿಕನ್‍ ಪ್ರಯೋಗ) ಸಮರ್ಥಿಸು.
ಅಕರ್ಮಕ ಕ್ರಿಯಾಪದ

ಆಸ್ಪದ ಕೊಡು: he spends more than his income allows ಅವನ ಸಂಪಾದನೆ ಆಸ್ಪದ ಕೊಡುವುದಕ್ಕೂ ಹೆಚ್ಚಾಗಿ ಅವನು ಖರ್ಚು ಮಾಡುತ್ತಾನೆ.

ನುಡಿಗಟ್ಟು

allow for

  1. ಎಣಿಕೆಗೆ ತೆಗೆದುಕೊ; ಗಣನೆಗೆ ತೆಗೆದುಕೊ: allowing for traffic delays ಸಂಚಾರದ ಅಡೆತಡೆಗಳನ್ನು ಗಣನೆಗೆ ತೆಗೆದುಕೊಂಡರೆ.
  2. ರಿಯಾಯಿತಿ ಕೊಡು; ವಿನಾಯಿತಿ ಕೊಡು; ಮನ್ನಿಸು: allowing for his faults ಅವನ ದೋಷಗಳನ್ನು ಮನ್ನಿಸಿದರೆ.