alienate ಏಲ್ಯನೇಟ್‍, ಏಲಿಅನೇಟ್‍
ಸಕರ್ಮಕ ಕ್ರಿಯಾಪದ
  1. ಹೊರಗು ಮಾಡು; ದೂರ ಮಾಡು; ಅಗಲಿಸು; ಆಗದಂತೆ ಮಾಡು; ಅನಾದರ ಹುಟ್ಟಿಸು; ಆಸಕ್ತಿ ಕಳೆ: her children are alienated from her ಆಕೆಯ ಮಕ್ಕಳು ಆಕೆಯಿಂದ ದೂರವಾಗಿದ್ದಾರೆ.
  2. ಪರಾಧೀನ ಮಾಡು; ಪರಭಾರೆ ಮಾಡು; ಹಸ್ತಾಂತರಿಸು; ಅನ್ಯಾಕ್ರಾಂತ ಮಾಡು; ವರ್ಗಾಯಿಸು.
  3. ಬೇರೆ ಕಡೆಗೆ ತಿರುಗಿಸು; ಅಡ್ಡ ತಿರುಗಿಸು: alienate funds from the intended purpose ಬಂಡವಾಳವನ್ನು ಯೋಜಿತ ಉದ್ದೇಶ ಬಿಟ್ಟು ಬೇರೆ ಕಡೆ ತಿರುಗಿಸು.