agreeableness ಅಗ್ರಿಅಬ್‍ಲ್‍ನಿಸ್‍
ನಾಮವಾಚಕ
  1. (ಮನಸ್ಸಿಗೆ ಯಾ ದೇಹಕ್ಕೆ) ಹಿತವಾಗಿರುವಿಕೆ; ಪ್ರಿಯವಾಗಿರುವಿಕೆ; ಆಹ್ಲಾದಕರವಾಗಿರುವಿಕೆ.
  2. (ಯಾವುದೇ ವಿಷಯದಲ್ಲಿ) ಮನಸ್ಸಿರುವಿಕೆ; ಇಷ್ಟವಿರುವಿಕೆ.
  3. (ಯಾವುದೇ ವಸ್ತು ಯಾ ವಿಷಯ) ಒಪ್ಪುವಂತಿರುವಿಕೆ; ಅಂಗೀಕಾರಾರ್ಹತೆ: agreeableness of the proposal ಆ ಸಲಹೆಯ ಅಂಗೀಕಾರಾರ್ಹತೆ.
  4. (ಆಹಾರ, ವಾಯುಗುಣ, ಮೊದಲಾದವುಗಳ ವಿಷಯದಲ್ಲಿ) ಒಗ್ಗುವಂತಿರುವಿಕೆ; ಹಿತಕರವಾಗಿರುವಿಕೆ.