agreeable ಅಗ್ರಿಅಬ್‍ಲ್‍
ಗುಣವಾಚಕ
  1. ಪ್ರಿಯವಾದ; ಹಿತವಾದ; ಆಹ್ಲಾದಕರ; ಸಂತೋಷಕರ: agreeable voice ಪ್ರಿಯವಾದ ಧ್ವನಿ; ಹಿತ ಶಾರೀರ.
  2. (ಆಡುಮಾತು) (ವ್ಯಕ್ತಿಯ ವಿಷಯದಲ್ಲಿ ಯಾವುದೇ ಕೆಲಸಕ್ಕೆ, ವಿಷಯಕ್ಕೆ ಯಾ ಯಾವುದನ್ನೇ ಮಾಡಲು) ಮನಸ್ಸುಳ್ಳ; ಮನಸಾರೆ–ಒಪ್ಪುವ, ಸಮ್ಮತಿಸುವ, ಇಷ್ಟವಿರುವ.
  3. (ದೇಹಕ್ಕೆ ಯಾ ಮನಸ್ಸಿಗೆ) ಒಗ್ಗುವ; ಹಿಡಿಸುವ; ಹಿತವಾದ; ಅನುಕೂಲವಾದ; ಅನುಕೂಲಕರ; ಹಿತಕರ: agreeable climate ಹಿತವಾದ ವಾತಾವರಣ.
  4. ಸರಿಬೀಳುವ: ಹೊಂದುವ; ತಾಳೆಯಾಗುವ: the theory was agreeable to the data ವಾದಕ್ಕೂ ವಾಸ್ತವಾಂಶಗಳಿಗೂ ಹೊಂದಿಕೆಯಾಗಿತ್ತು.