aggravation ಆಗ್ರವೇಷನ್‍
ನಾಮವಾಚಕ
  1. (ರೋಗ, ಕಷ್ಟ, ಅಪರಾಧ, ಮೊದಲಾದವುಗಳ ವಿಷಯದಲ್ಲಿ) ಹೆಚ್ಚಾಗುವಿಕೆ; ಹೆಚ್ಚಳ; ಆಧಿಕ್ಯ; ಉಲ್ಬಣ; ಪ್ರಕೋಪ; ತೀವ್ರತೆ: an aggravation of the problem ಸಮಸ್ಯೆಯ ಉಲ್ಬಣ.
  2. ಕೆರಳಿಕೆ; ವಿಕೋಪ; ಉದ್ರೇಕ: aggravation between group and group ಗುಂಪು ಗುಂಪಿನ ನಡುವಣ ವಿಕೋಪ.
  3. ಉದ್ರೇಕ ಕಾರಣ; ಕೋಪ, ಸಂಕಟ, ಮೊದಲಾದವನ್ನು ತೀವ್ರಗೊಳಿಸುವ ಘಟನೆ ಯಾ ಪರಿಸ್ಥಿತಿ: that he was sold by his own parents was an aggravation to him ಸ್ವಂತ ತಂದೆ ತಾಯಿಗಳೇ ತನ್ನನ್ನು ಮಾರಿದರೆಂಬುದು ಅವನ ಉದ್ರೇಕಕ್ಕೆ ಕಾರಣವಾಯಿತು.