agglutination ಅಗ್ಲೂಟಿನೇಷನ್‍
ನಾಮವಾಚಕ
  1. ಅಂಟಿಕೆ; ಬಂಧನ; ಸಂಶ್ಲೇಷ; ಅಂಟುಗೂಡಿದ ಸ್ಥಿತಿ.
  2. ಬೇರೆ ಬೇರೆ ಪದಾರ್ಥಗಳ ಅವ್ಯವಸ್ಥಿತ ರಾಶಿ ಯಾ ಗುಂಪು: an agglutination of streets, shops and houses ಅವ್ಯವಸ್ಥಿತವಾಗಿ ಬೆಳೆದ ಮನೆ, ಮಳಿಗೆ, ಹಾದಿ ಬೀದಿಗಳ ಗುಂಪು.
  3. (ಭಾಷಾಶಾಸ್ತ್ರ) ಸಂಶ್ಲೇಷಣ; ನಿರ್ದಿಷ್ಟ ಅರ್ಥವನ್ನು ಕೊಡುವ ಘಟಕಗಳನ್ನು (ಪದ, ಧಾತು, ಮೊದಲಾದವನ್ನು) ಸೇರಿಸುವುದರಿಂದ, ಅವುಗಳ ರೂಪ ಮತ್ತು ಅರ್ಥಗಳಲ್ಲಿ ಬದಲಾವಣೆಯಾಗದೆ ಸಂಯುಕ್ತಾರ್ಥವನ್ನು ಕೊಡುವ ವ್ಯುತ್ಪನ್ನ ಪದಗಳು ಯಾ ಸಮಾಸಗಳು ರಚನೆಯಾಗುವುದು.
  4. (ಜೀವವಿಜ್ಞಾನ) ಸಮೂಹನ; ಸಂಶ್ಲೇಷಣ; ದ್ರವದಲ್ಲಿ ನಿಲಂಬಿತವಾಗಿರುವ ರಕ್ತಕಣಗಳು, ಬ್ಯಾಕ್ಟೀರಿಯಾ, ವೈರಸ್‍, ಮೊದಲಾದ ಕಣಗಳು ಯಾವುದೇ ಕ್ರಿಯಾಕಾರಕದ ಸಹಾಯದಿಂದ ಒಂದುಗೂಡಿ ನಿಷ್ಪಟುಗೊಳ್ಳುವುದು.