See also 2age
1age ಏಜ್‍
ನಾಮವಾಚಕ
  1. ವಯಸ್ಸು; ಪ್ರಾಯ; ಕಳೆದುಹೋದ ಬದುಕಿನ ಯಾ ಜೀವಿತದ ಕಾಲ ಯಾ ಅವಧಿ: his age is twenty ಅವನ ವಯಸ್ಸು ಇಪ್ಪತ್ತು.
  2. ವಯಸ್ಸು; ಯಾವುದೇ ಉದ್ದೇಶಕ್ಕೆ ಅಗತ್ಯವಾದ ನಿರ್ದಿಷ್ಟ ಜೀವಾವಧಿ: he was past the age for military service ಸೈನಿಕ ಸೇವೆಗೆ ಯಾ ಸೈನ್ಯಕ್ಕೆ ಸೇರುವ ವಯಸ್ಸು ಅವನಿಗೆ ಆಗಿಹೋಗಿತ್ತು.
  3. ಮುಪ್ಪು; ವೃದ್ಧಾಪ್ಯ; ವಾರ್ಧಕ್ಯ: the talkativeness of age ಮುಪ್ಪಿನ ಮಾತಾಳಿತನ, ವಾಚಾಳತನ.
  4. ತಲೆಮಾರು; ತಲೆಮೊರೆ; ಪೀಳಿಗೆ: the age before the motor car ಮೋಟಾರು ಗಾಡಿಯ ಹಿಂದಣ ಆ ತಲೆಮಾರು;
  5. (ಭೂವಿಜ್ಞಾನ) (ಭೂಮಿಯ ಇತಿಹಾಸದಲ್ಲಿ) ಯುಗ; ಅನೇಕಾನೇಕ ವರ್ಷಗಳ ಅವಧಿ: the ice age ಹಿಮಯುಗ.
  6. (ಭೂವಿಜ್ಞಾನ) ಯುಗ; ಕಾಲ; ಶಿಲಾರಚನೆಯ ಒಂದು ನಿರ್ದಿಷ್ಟ ಹಂತ ಯಾ ಸ್ಥಿತಿ ರೂಪುಗೊಳ್ಳುವ ಅವಧಿ.
  7. (ಆಡುಮಾತು) (ಮುಖ್ಯವಾಗಿ ಬಹುವಚನದಲ್ಲಿ) ಯುಗ; ದೀರ್ಘಕಾಲ; ಬಹಳ ಹೊತ್ತು; ಬಹುಕಾಲ: waiting for ages ಬಹಳ ಹೊತ್ತಿನಿಂದ ಕಾಯುತ್ತ. it seemed an age ಒಂದು ಯುಗವೇ ಕಳೆದಂತೆ ತೋರಿತು.
  8. (ಚರಿತ್ರೆ) ಯುಗ; ಇತಿಹಾಸದ ಯಾವುದೇ ಗೊತ್ತಾದ ಕಾಲ, ಅವಧಿ: Stone Age ಶಿಲಾಯುಗ. the age of atomic science ಪರಮಾಣು ವಿಜ್ಞಾನದ ಯುಗ.
  9. ಆಯುಷ್ಯ; ಆಯಸ್ಸು; ವಯೋಮಾನ; ಜೀವಿತಕಾಲ; ಜೀವಮಾನ; ಆಯುರ್ದಾಯ: the normal age of a dog is reckoned as twelve years ನಾಯಿಯ ಆಯುಷ್ಯ ಸಾಮಾನ್ಯವಾಗಿ ಹನ್ನೆರಡು ವರ್ಷವೆಂದು ಪರಿಗಣಿಸಲಾಗಿದೆ.
  10. ವಯಸ್ಸು; ಜೀವನದ ಯಾವುದೇ ಅವಸ್ಥೆ ಯಾ ಅವಧಿ: a person of middle age ಮಧ್ಯವಯಸ್ಸಿನ ವ್ಯಕ್ತಿ.
  11. ಪ್ರಾಯ; ವಯಸ್ಸು; ಪ್ರಾಪ್ತವಯಸ್ಸು; ಮುಖ್ಯವಾಗಿ ವ್ಯಕ್ತಿಯು ಕಾನೂನುರೀತ್ಯಾ ಹಕ್ಕುಗಳು ಹಾಗೂ ಜವಾಬ್ದಾರಿಗಳನ್ನು ಪಡೆಯುವ ಕಾಲ: he reached the age of marriage ಅವನಿಗೆ ಮದುವೆಯ ಪ್ರಾಯ ಬಂತು.
  12. ಸಮಕಾಲ; ತತ್ಕಾಲ; ಸಮಕಾಲೀನ ಅವಧಿ: poet of his age ಅವನ ಕಾಲದ ಕವಿ.
  13. ವಯಸ್ಸು; ದೈಹಿಕ, ಆನಸಿಕ ಯಾ ಭಾವುಕ ಬೆಳವಣಿಗೆಯ ಮಟ್ಟ: though he is only seven, his mental age is ten ಅವನಿಗೆ ಏಳೇ ವರ್ಷವಾಗಿದೆಯಾದರೂ ಅವನ ಮಾನಸಿಕ ವಯಸ್ಸು ಹತ್ತು.
ಪದಗುಚ್ಛ
  1. full age (ಇಂಗ್ಲೆಂಡಿನ ನ್ಯಾಯಶಾಸ್ತ್ರ) ಪ್ರಾಪ್ತವಯಸ್ಸು; 21 ವರ್ಷಗಳು.
  2. look one’s age ವಯಸ್ಸಿಗೆ ತಕ್ಕಂತೆ ಕಾಣು; ವಯಸ್ಸಿಗೆ ತಕ್ಕ ಆಕಾರ, ಗಾತ್ರ ಇರು; ಎಷ್ಟು ವಯಸ್ಸಾಗಿದೆಯೋ ಅಷ್ಟು ಕಾಣು.
  3. moon’s age ಶುಕ್ಲ (ಪಕ್ಷದ) ತಿಥಿ; ಅಮಾವಾಸ್ಯೆಯ ನಂತರ ಕಳೆದ ದಿನಗಳು.
  4. over age
    1. ಸಾಕಷ್ಟು ವಯಸ್ಸಾದ; ಕಾಲ ಸಂದ; ಹಳೆಯದಾದ: over age warships ಹಳೆಯ ಯುದ್ಧನೌಕೆಗಳು.
    2. ವಯಸ್ಸು ಮೀರಿದ; ನಿರ್ದಿಷ್ಟ ವಯೋಮಿತಿಯನ್ನು ದಾಟಿದ; ಪ್ರಾಯ ಕಳೆದ: over age students ಪ್ರಾಯಮೀರಿದ ವಿದ್ಯಾರ್ಥಿಗಳು; ವಯಸ್ಸಾದ ವಿದ್ಯಾರ್ಥಿಗಳು.
  5. under age ಸಾಕಷ್ಟು ವಯಸ್ಸಾಗಿರದ; ವಯಸ್ಸಿಗೆ ಬರದ; (ಮುಖ್ಯವಾಗಿ ಕಾನೂನುರೀತ್ಯಾ) ಪ್ರಾಪ್ತವಯಸ್ಕನಾಗಿರದ.
ನುಡಿಗಟ್ಟು
  1. act one’s age = ನುಡಿಗಟ್ಟು\((4)\).
  2. age before beauty ವಯಸ್ಸಿಗೆ ಆದ್ಯತೆ ಕೊಡಬೇಕು, ಪ್ರಾಧಾನ್ಯ ನೀಡಬೇಕು, ಪ್ರಥಮ ಸ್ಥಾನವೀಯಬೇಕು; ದೊಡ್ಡವರಾದ ಮೇಲೆ ಚಿಕ್ಕವರು ಬರಬೇಕು.
  3. age before honesty = ನುಡಿಗಟ್ಟು\((2)\).
  4. be your age (ಆಡುಮಾತು) ಯೋಗ್ಯವಾಗಿ ವರ್ತಿಸು; ಗಂಭೀರವಾಗಿ, ಜವಾಬ್ದಾರಿಯಿಂದ ವರ್ತಿಸು; ವಯಸ್ಸಿಗೆ ತಕ್ಕಂತೆ–ನಡೆದುಕೊ, ಇರು; ವಯೋಚಿತವಾಗಿ ನಡೆದುಕೊ.
  5. come of age (ಮುಖ್ಯವಾಗಿ ಕಾನೂನುರೀತ್ಯಾ) ಪ್ರಾಪ್ತವಯಸ್ಕನಾಗು; ವಯಸ್ಸಿಗೆ ಬರು; ಪ್ರಾಪ್ತವಯಸ್ಸೆಂದು ಕಾನೂನುರೀತ್ಯಾ ಸಿದ್ಧವಾಗಿರುವ 18 ಯಾ 20 ವರ್ಷ ತಲುಪು.
  6. of an age with ಸಮವಯಸ್ಕ; ಒಂದೇ ಯಾ ಅದೇ ವಯಸ್ಸಿನ; ಸಮವಯಸ್ಸಿನ.
See also 1age
2age ಏಜ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ, ageing ಯಾ aging).
  1. ಮುಪ್ಪಾಗಿಸು; ಮುಪ್ಪು ಬರಿಸು; ಮುದಿಮಾಡು: worry ages a man ಚಿಂತೆ ಮನುಷ್ಯನನ್ನು ಮುಪ್ಪಾಗಿಸುತ್ತದೆ.
  2. ಮಾಗಿಸು; ಹದವಾಗಿಸು; ಪಕ್ವಸ್ಥಿತಿಗೆ ತರು: tannic acid ages the brandy ಟ್ಯಾನಿಕ್‍ ಆಮ್ಲ ಬ್ರಾಂದಿಯನ್ನು ಮಾಗಿಸುತ್ತದೆ.
  3. ಬಲಗುಂದಿಸು; ಶಕ್ತಿಗುಂದಿಸು; ದುರ್ಬಲಗೊಳಿಸು: axcessive driving ages a car battery ತುಂಬಾ ಓಡಿಸುವುದು ಕಾರಿನ ಬ್ಯಾಟರಿಯನ್ನು ದುರ್ಬಲಗೊಳಿಸುತ್ತದೆ.
ಅಕರ್ಮಕ ಕ್ರಿಯಾಪದ
  1. ವಯಸ್ಸಾಗು; ಮುದಿಯಾಗು; ಮುಪ್ಪಾಗು; ವೃದ್ಧನಾಗು; ವಯಸ್ಸಿನ ಪರಿಣಾಮ ತೋರು: no two people age alike ಯಾವುದೇ ಇಬ್ಬರು ವ್ಯಕ್ತಿಗಳು ಒಂದೇ ರೀತಿಯಲ್ಲಿ ಮುಪ್ಪಾಗುವುದಿಲ್ಲ. his mind did not age ಅವನ ಮನಸ್ಸು ಮುಪ್ಪಾಗಲಿಲ್ಲ. (ಮುಪ್ಪಿನ ಪರಿಣಾಮ ತೋರಲಿಲ್ಲ).
  2. (ಮದ್ಯ, ಮರ, ಮೊದಲಾದವುಗಳ ವಿಷಯದಲ್ಲಿ) ಮಾಗು; ಹದವಾಗು; ಪಕ್ವವಾಗು: the wine has aged ಮದ್ಯ ಮಾಗಿದೆ.
  3. ಹೆಚ್ಚು ಮುದಿಯಾದಂತೆ ಕಾಣು: he has aged a lot recently ಇತ್ತೀಚೆಗೆ ಅವನು ಬಹಳ ಮುದಿಯಾಗಿಬಿಟ್ಟಂತೆ ಕಾಣುತ್ತಾನೆ.
  4. (ಹಳೆಯದಾದುದರಿಂದ) ಬಲಗುಂದು; ಶಕ್ತಿಗುಂದು; ದುರ್ಬಲವಾಗು; ಬಲಹೀನವಾಗು: a car battery ages ಕಾರಿನ ಬ್ಯಾಟರಿ (ಹಳೆಯದಾದಂತೆ) ಶಕ್ತಿಗುಂದುತ್ತದೆ.