afterthought ಆಹ್ಟರ್‍ತಾಟ್‍
ನಾಮವಾಚಕ
  1. ಹಿಂದಾಲೋಚನೆ; ಅನುಚಿಂತನೆ; ಪಶ್ಚಾತ್‍ಯೋಚನೆ; ಯಾವುದೇ ಪ್ರಸಂಗ ಮುಗಿದುಹೋದ ಮೇಲೆ ತಡವಾಗಿ ಹೊಳೆಯುವ ಯೋಚನೆ, ಉತ್ತರ, ನಿದರ್ಶನ, ಮೊದಲಾದವು: left space on every page for afterthoughts ಪ್ರತಿಪುಟದಲ್ಲೂ ಅನುಚಿಂತನೆಗಾಗಿ ಸ್ಥಳ ಬಿಟ್ಟ.
  2. ಅನುಬಂಧ; ಪಶ್ಚಾತ್‍ರಹಿತ; ಮೂಲಯೋಜನೆ ಯಾ ನಕ್ಷೆಯಲ್ಲಿಲ್ಲದ, ಅನಂತರ ಸೇರಿಸಿದ ಭಾಗ, ವಸ್ತು, ವಿಷಯ, ಮೊದಲಾದವು: the room added as an afterthought ಪಶ್ಚಾತ್‍ರಚಿತವಾದ, ಅನಂತರ ಸೇರಿಸಿದ–ಕೊಠಡಿ.
  3. ಮರುಚಿಂತನೆ; ಮರುಯೋಚನೆ; ಪುನಶ್ಚಿಂತನೆ; ಪುನರಾಲೋಚನೆ; ಪುನರ್ಯೋಚನೆ; ಯಾವುದೇ ವಿಷಯವನ್ನು ಕುರಿತು ಮತ್ತೆ ಆಲೋಚಿಸುವುದು.