See also 2afloat
1afloat ಅಹ್ಲೋಟ್‍
ಗುಣವಾಚಕ
  1. (ನೀರಿನ ಮೇಲೆ ಯಾ ಗಾಳಿಯಲ್ಲಿ) ತೇಲಿ ಹೋಗುತ್ತಿರುವ; ತೇಲುತ್ತಿರುವ; ಹಾರಾಡುತ್ತಿರುವ: tha boat remained afloat ದೋಣಿಯು ತೇಲುತ್ತಿತ್ತು. her hair is afloat in the summer breeze ಗ್ರೀಷ್ಮದ ಮಂದಮಾರುತದಲ್ಲಿ ಅವಳ ಕೇಶರಾಶಿ ಹಾರಾಡುತ್ತಿದೆ.
  2. (ವ್ಯಕ್ತಿಗಳ, ಸರಕುಗಳ ವಿಷಯದಲ್ಲಿ) (ಸಮುದ್ರದಲ್ಲಿನ) ನಾವೆಯಲ್ಲಿರುವ; ಹಡಗಿನಲ್ಲಿರುವ: a large quantity of wheat is still afloat ಹೆಚ್ಚು ಪ್ರಮಾಣದ ಗೋಧಿ ಇನ್ನೂ ನೌಕೆಯಲ್ಲೇ ಇದೆ.
  3. ನೀರಿನಲ್ಲಿ ಮುಳುಗಿರುವ; ನೀರಿನಿಂದ ತುಂಬಿರುವ: the ship’s deck was afloat ಹಡಗಿನ ದಕ್ಕೆ ನೀರಿನಲ್ಲಿ ಮುಳುಗಿತ್ತು.
  4. (ಆರ್ಥಿಕ ತೊಂದರೆಗಳಿಂದ) ದೂರವಾಗಿರುವ: ಮುಕ್ತವಾಗಿರುವ: the inheritance kept them afloat for years ಪಿತ್ರಾರ್ಜಿತವಾಗಿ ಬಂದದ್ದು ವರ್ಷಗಳವರೆಗೆ ಅವರನ್ನು ಅರ್ಥಿಕ ತೊಂದರೆಗಳಿಂದ ದೂರವಾಗಿಟ್ಟಿತ್ತು.
  5. (ಪೂರ್ಣ) ಚಟುವಟಿಕೆಯಿಂದ; ಚುರುಕಿನಿಂದ; ಬಿರುಸಾಗಿ ಕೆಲಸ ಮಾಡುತ್ತಿರುವ: publishing venture is afloat at the tight time ಪ್ರಕಟಣೋದ್ಯಮ ಸಕಾಲದಲ್ಲಿ ಪೂರ್ಣ ಚಟುವಟಿಕೆಯಿಂದ ಕೆಲಸ ಮಾಡುತ್ತಿದೆ.
  6. ಚಲಾವಣೆಯಲ್ಲಿರುವ; ಪ್ರಚಾರದಲ್ಲಿರುವ; ಪ್ರಚಲಿತ: a rumour is afloat ಗಾಳಿ ಸುದ್ದಿ ಪ್ರಚಾರದಲ್ಲಿದೆ.
  7. ಕೊಚ್ಚಿಕೊಂಡು, ಹೊಡೆದುಕೊಂಡು–ಹೋಗುತ್ತಿರುವ; ಗೊತ್ತುಗುರಿಯಿಲ್ಲದೆ–ಅಲೆದಾಡುತ್ತಿರುವ, ಚಲಿಸುತ್ತಿರುವ: afloat from place to place ಸ್ಥಳದಿಂದ ಸ್ಥಳಕ್ಕೆ ಗೊತ್ತು ಗುರಿಯಿಲ್ಲದೆ ಅಲೆಯುತ್ತಿರುವ.
See also 1afloat
2afloat ಅಹ್ಲೋಟ್‍
ಕ್ರಿಯಾವಿಶೇಷಣ
  1. (ನೀರಿನ ಮೇಲೆ ಯಾ ಗಾಳಿಯಲ್ಲಿ) ತೇಲುತ್ತ; ತೇಲಿಹೋಗುತ್ತಾ.
  2. ಹಡಗಿನ ಮೇಲೆ; ಹಡಗಿನಲ್ಲಿ; ನಾವೆಯಲ್ಲಿ.
  3. ಹಣದ ತೊಂದರೆಯಿಲ್ಲದೆ; ಸಾಲವಿಲ್ಲದೆ; ಸಾಲಕ್ಕೆ ಸಿಕ್ಕದೆ; ಆರ್ಥಿಕವಾಗಿ ಸುಭದ್ರಸ್ಥಿತಿಯಲ್ಲಿ.
  4. ಚಲಾವಣೆಯಲ್ಲಿ; ಪ್ರಚಾರದಲ್ಲಿ; ಸುತ್ತಲೂ ಹಬ್ಬಿ: rumours were afloat ವದಂತಿಗಳು ಸುತ್ತಲೂ ಹಬ್ಬಿದ್ದವು.
  5. ಹೊಡೆದುಕೊಂಡು, ಕೊಚ್ಚಿಕೊಂಡು–ಹೋಗುತ್ತಾ; ದಿಕ್ಕಾಪಾಲಾಗಿ, ಗೊತ್ತುಗುರಿಯಿಲ್ಲದೆ–ಚಲಿಸುತ್ತಾ.
  6. ನೀರು ತುಂಬಿ; ನೀರಿನಲ್ಲಿ ಮುಳುಗಿ: the ship’s deck was afloat ಹಡಗಿನ ಮೇಲೆಲ್ಲ ನೀರು ತುಂಬಿತ್ತು.
  7. ಪೂರ್ಣ ಚಟುವಟಿಕೆಯಿಂದ ಕೆಲಸ–ನಡೆಸುತ್ತಾ, ಮಾಡುತ್ತಾ.