afford ಅಹೋರ್ಡ್‍
ಸಕರ್ಮಕ ಕ್ರಿಯಾಪದ
  1. (ಯಾವುದನ್ನೇ ಮಾಡಲು, ನಿರ್ವಹಿಸಲು, ಕೊಡಲು) ಸಮರ್ಥನಾಗು; ಶಕ್ತನಾಗು.
  2. (ವಸ್ತುವಿನ ವಿಷಯದಲ್ಲಿ ಸಹ) ಕೊಡು; ನೀಡು; ಒದಗಿಸು; ಹವಣಿಸು; ದೊರಕಿಸು; ಪೂರೈಸು: this tree affords a pleasant shade ಈ ಮರ ಹಿತಕರವಾದ ನೆರಳು ಕೊಡುತ್ತದೆ.
ಪದಗುಚ್ಛ

can afford

  1. (ಮಾಡಲು, ನಿರ್ವಹಿಸಲು, ನೀಡಲು, ಕೊಡಲು) ಶಕ್ತನಾಗಿರು; ಸಮರ್ಥನಾಗಿರು: can’t afford to let him think so ಅವನನ್ನು ಆ ರೀತಿ ಯೋಚಿಸಲು ಬಿಡಲಾರೆ.
  2. (ಮಾಡಲು, ನಿರ್ವಹಿಸಲು, ಹೊತ್ತುಕೊಳ್ಳಲು) ಅನುಕೂಲ ಪಡೆದಿರು; ಸೌಕರ್ಯ ಪಡೆದಿರು; ಐಶ್ವರ್ಯ, ಹಣ–ಹೊಂದಿರು: can’t afford college ಕಾಲೇಜು ಸೇರಲು ಅನುಕೂಲವಿಲ್ಲ; ಕಾಲೇಜಿನ ಖರ್ಚನ್ನು ನಿರ್ವಹಿಸಲು ಹಣವಿಲ್ಲ. can afford to be generous ಉದಾರಿಯಾಗಿರಬಹುದಾದಷ್ಟು ಐಶ್ವರ್ಯವಿದೆ, ಸೌಕರ್ಯವಿದೆ.