affliction ಅಹ್ಲಿಕ್‍ಷನ್‍
ನಾಮವಾಚಕ
  1. ಕಡುಸಂಕಟ; ವೇದನೆ; ಸಹಿಸಲಾರದ ಕ್ಲೇಶ; ಬೇಗುದಿ; ಹಿಂಸೆ; ವ್ಯಥೆ; ದುಃಖ; ಯಾತನೆ; ತೀವ್ರಬಾಧೆ; ಸಂತಾಪ.
  2. (ಕ್ಷಾಮ, ಪಿಡುಗು, ಮೊದಲಾದ) ವಿಪತ್ತು; ಆಪತ್ತು; ಸಂಕಟ; ಅನರ್ಥ.
  3. ಅನರ್ಥಕಾರಿ; ಕ್ಲೇಶಕಾರಿ; ಕ್ಲೇಶವನ್ನು ಯಾ ವಿಪತ್ತನ್ನು ಉಂಟು ಮಾಡುವಂಥದ್ದು: the afflictions of old age ಮುಪ್ಪಿನ ಕ್ಲೇಶಗಳು (ಕಿವುಡು ಮೊದಲಾದವು).