aesthete ಈ(ಎ)ಸ್‍ತೀಟ್‍
ನಾಮವಾಚಕ
  1. ಕಲಾರಾಧಕ; ಸೌಂದರ್ಯೋಪಾಸಕ; ರಸಾಭಿಜ್ಞ; ಕಲೋಪಾಸಕ; ಮುಖ್ಯವಾಗಿ ಕಲೆ, ಸಂಗೀತ, ಕಾವ್ಯ, ಮೊದಲಾದವುಗಳಲ್ಲಿನ ಸೌಂದರ್ಯದ ವಿಷಯದಲ್ಲಿ ಸೂಕ್ಷ್ಮ ಸಂವೇದನೆ ಇರುವವನು ಯಾ ಇದೆಯೆಂದು ಹೇಳಿಕೊಳ್ಳುವವನು.
  2. ಕಲಾವ್ಯಸನಿ; ಕಲೆಯ ಗೀಳು ಹಚ್ಚಿಕೊಂಡಿರುವವನು.
  3. (ಬ್ರಿಟಿಷ್‍ ಪ್ರಯೋಗ) (ವಿಶ್ವವಿದ್ಯಾನಿಲಯದಲ್ಲಿ) ವ್ಯಾಸಂಗನಿಷ್ಠ; ಅಭ್ಯಾಸನಿರತ ವ್ಯಕ್ತಿ.