adverb ಆಡ್‍ವರ್ಬ್‍
ನಾಮವಾಚಕ

ಕ್ರಿಯಾವಿಶೇಷಣ; ಮುಖ್ಯವಾಗಿ ಗುಣವಾಚಕ, ಕ್ರಿಯಾಪದ, ಉಪಸರ್ಗ ಯಾ ಇನ್ನೊಂದು ಕ್ರಿಯಾವಿಶೇಷಣವನ್ನು ವಿಶೇಷಿಸುವ–ಸ್ಥಳ (here), ಕಾಲ (now), ದರ್ಜೆ (too), ರೀತಿ ಯಾ ಗುಣ (well, surprisingly), ಕಾರಣ (therefore), ತರತಮಭಾವ (soon, sooner, soonest), ಸಂಖ್ಯೆ (triply), ವಿರೋಧ (however) ಅಸ್ತ್ಯರ್ಥ (certainly), ನಾಸ್ತ್ಯರ್ಥ (not), ಮೊದಲಾದವುಗಳ ಸಂಬಂಧವನ್ನು ತೋರಿಸುವ ಪದಗುಚ್ಛ, ನುಡಿಗಟ್ಟು ಯಾ ವಾಕ್ಯವನ್ನು ವಿಶೇಷಿಸುವ ಪದ, ಶಬ್ದ.