adventurer ಅಡ್‍ವೆಂಚರರ್‍
ನಾಮವಾಚಕ
  1. ಸಾಹಸಿಗ; ಸಾಹಸಗಾರ; ಎದೆಗಾರ; ಸಾಹಸಗಳನ್ನು ಹುಡುಕಿಕೊಂಡು ಹೋಗುವವನು.
  2. ಕೂಲಿಯೋಧ: ಕೂಲಿ ಸೈನಿಕ; ಬೆಲೆಯೋಧ; ಹಣಕ್ಕಾಗಿ ಯಾವುದೇ ದೇಶದ ಸೈನ್ಯಕ್ಕೆ ಸೇರುವವನು ಯಾ ಸೇರಲು ಸಿದ್ಧನಾಗಿರುವವನು.
  3. ವಾಣಿಜ್ಯ ಸಾಹಸಿ; ಸಟ್ಟಾ ವ್ಯಾಪಾರಿ; ಎಂತಹ ನಷ್ಟವನ್ನೂ ಲೆಕ್ಕಿಸದ ಸಾಹಸೋದ್ಯಮಿ.
  4. ಕುಟಿಲ ಜೀವಿ; ಕುಟಿಲೋಪಾಯದಿಂದ–ಬದುಕುವವನು, ಹಣ ಮತ್ತು ಅಧಿಕಾರವನ್ನು ಪಡೆಯಲು ಹವಣಿಸುವವನು.