admit ಅಡ್‍ಮಿಟ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ admitting, ಭೂತರೂಪ ಮತ್ತು ಭೂತಕೃದಂತ admitted).
  1. (ಸ್ಥಳ, ವರ್ಗ, ಸವಲತ್ತು, ಸದಸ್ಯತ್ವ, ಮೊದಲಾದವುಗಳಿಗೆ ವ್ಯಕ್ತಿ ಮೊದಲಾದವರನ್ನು) ಸೇರಿಸು; ಸೇರಿಸಿಕೊ; ಸೇರಲು ಅನುಮತಿ, ಅವಕಾಶ ನೀಡು; ಒಳಕ್ಕೆ ಬಿಡು; ಪ್ರವೇಶ ಮಾಡಿಸು; ಪ್ರವೇಶ–ಕೊಡು, ದೊರಕಿಸು: this ticket admits one person ಈ ಟಿಕೆಟ್ಟು ಒಬ್ಬನಿಗೆ ಪ್ರವೇಶ ಕೊಡುತ್ತದೆ. admit a student to college ವಿದ್ಯಾರ್ಥಿಯನ್ನು ಕಾಲೇಜಿಗೆ ಸೇರಿಸು.
  2. (ನಿಜವೆಂದು ಯಾ ಸಮಂಜಸವೆಂದು ಯಾ ಅಂತೆಂದು ಯಾ ಅಂತಿದೆಯೆಂದು) ಒಪ್ಪು; ಅಂಗೀಕರಿಸು: admit failure ಸೋಲನ್ನು ಒಪ್ಪಿಕೊ. admit admitted his guilt ತನ್ನ ಅಪರಾಧವನ್ನು ಒಪ್ಪಿಕೊಂಡ.
  3. (ಆವೃತ ಪ್ರದೇಶದ ವಿಷಯದಲ್ಲಿ) ಸ್ಥಳವಿರು; ಸ್ಥಳಾವಕಾಶ ಹೊಂದಿರು: the passage admits two abreast ಇಬ್ಬರು ಜೊತೆಯಾಗಿ ಹೋಗಲು ಆ ದಾರಿಯಲ್ಲಿ ಸ್ಥಳಾವಕಾಶವಿದೆ.
ಅಕರ್ಮಕ ಕ್ರಿಯಾಪದ

ಎಡೆಗೊಡು; ಆಸ್ಪದ ಕೊಡು; ಅವಕಾಶ ನೀಡು.

ಪದಗುಚ್ಛ

admit of (ಸಂದೇಹ, ಸುಧಾರಣೆ, ಮೊದಲಾದವುಗಳಿಗೆ) ಎಡೆಗೊಡು; ಅವಕಾಶ ಕೊಡು.