administration ಅಡ್‍ಮಿನಿಸ್ಟ್ರೇಷನ್‍
ನಾಮವಾಚಕ
  1. ಆಡಳಿತ; ಕಾರ್ಯ ನಿರ್ವಹಣ; ಕಾರ್ಯಭಾರ; ಕಾರುಬಾರು.
  2. ರಾಜ್ಯಭಾರ; ರಾಜ್ಯಾಡಳಿತ.
  3. ಮಂತ್ರಿಮಂಡಲ; ಆಡಳಿತಾಂಗ; ಕಾರ್ಯಾಂಗ; ಸರ್ಕಾರ.
  4. (ನ್ಯಾಯಶಾಸ್ತ್ರ) ಉಯಿಲು ಯಾ ಕಾನೂನಿನಂತೆ ಸತ್ತ ವ್ಯಕ್ತಿಯ ಆಸ್ತಿಯ ಆಡಳಿತ, ನಿರ್ವಹಣೆ.
  5. (ಪ್ರಮಾಣವಚನವನ್ನು) ವಿಧಿಸುವಿಕೆ; ತೆಗೆದುಕೊಳ್ಳುವಂತೆ ಮಾಡುವುದು.
  6. (ಮತಸಂಸ್ಕಾರ, ನ್ಯಾಯ, ಮೊದಲಾದವುಗಳ) ಪ್ರಧಾನ; ಒದಗಿಸುವಿಕೆ; ಕೊಡುವಿಕೆ; ದೊರಕಿಸುವಿಕೆ; ನೀಡಿಕೆ.
  7. (ಔಷಧ, ಮುಲಾಮು, ಮೊದಲಾದವನ್ನು) ಕೊಡುವಿಕೆ; ಹಚ್ಚುವಿಕೆ; ಲೇಪನ; ಪ್ರಾಶನ ಮಾಡಿಸುವಿಕೆ; ಕುಡಿಸುವಿಕೆ.
  8. (ಅಮೆರಿಕನ್‍ ಪ್ರಯೋಗ) ರಾಷ್ಟ್ರಾಧ್ಯಕ್ಷನ ಆಡಳಿತಾವಧಿ.
ಪದಗುಚ್ಛ

letters of administration ನಿರ್ವಹಣ ಪತ್ರಗಳು; ಉಯಿಲು ಬರೆಯದೆ ಸತ್ತವನ ಆಸ್ತಿಯ ಆಡಳಿತ ನಡೆಸಲು ಕೊಟ್ಟ ಅಧಿಕಾರ ಪತ್ರಗಳು.