adjust ಅಜಸ್ಟ್‍
ಸಕರ್ಮಕ ಕ್ರಿಯಾಪದ
  1. ಸರಿಹೊಂದಿಸು; ಅಳವಡಿಸು: adjust the telescope for clear vision ಸ್ಪಷ್ಟವಾಗಿ ಕಾಣುವಂತೆ ದೂರದರ್ಶಕವನ್ನು ಅಳವಡಿಸು.
  2. (ಮುಖ್ಯವಾಗಿ ಸ್ವಲ್ಪಸ್ವಲ್ಪವಾಗಿ) ಕ್ರಮಗೊಳಿಸು; ಸರಿಪಡಿಸು; ವ್ಯವಸ್ಥೆಗೊಳಿಸು.
  3. (ನಷ್ಟವನ್ನು) ತೀರ್ಮಾನಿಸು; ನಿರ್ಣಯಿಸು; ಲೆಕ್ಕಹಾಕು; ಗೊತ್ತುಮಾಡು.
  4. (ವ್ಯತ್ಯಾಸಗಳನ್ನು) ಸರಿಪಡಿಸು; ಸಮನ್ವಯಗೊಳಿಸು; ಹೊಂದಿಸು; ಸರಿಹೊಂದಿಸು; ಒಗ್ಗಿಸು.
ಅಕರ್ಮಕ ಕ್ರಿಯಾಪದ

ಹೊಂದಿಕೊ; ಒಗ್ಗಿಕೊ; (ಯಾವುದೇ ಪರಿಸರ ಮೊದಲಾದವಕ್ಕೆ ತನ್ನನ್ನು) ಹೊಂದಿಸಿಕೊ: adjusted herself to the cold ಆಕೆ ಚಳಿಗೆ ಹೊಂದಿಕೊಂಡಳು.