adjudicate ಅಜೂಡಿಕೇಟ್‍
ಸಕರ್ಮಕ ಕ್ರಿಯಾಪದ
  1. (ಹಕ್ಕು ಮೊದಲಾದವುಗಳ ವಿಷಯದಲ್ಲಿ) ನ್ಯಾಯ ನಿರ್ಣಯ ಮಾಡು; ಶಾಸನರೀತ್ಯಾ ತೀರ್ಮಾನಿಸು; ಕಾನೂನಿನ ಪ್ರಕಾರ ತೀರ್ಪು ಕೊಡು.
  2. (ನ್ಯಾಯಾಲಯದ ತೀರ್ಮಾನದ ಮೂಲಕ ವ್ಯಕ್ತಿಯನ್ನು ದಿವಾಳಿ ಮೊದಲಾದವನನ್ನಾಗಿ) ಘೋಷಿಸು; ಹೇಳು.
ಅಕರ್ಮಕ ಕ್ರಿಯಾಪದ

(ನ್ಯಾಯಾಲಯ, ನ್ಯಾಯಮಂಡಲಿ, ಸ್ಪರ್ಧೆ, ಮೊದಲಾದವುಗಳಲ್ಲಿ) ತೀರ್ಪುಗಾರನಾಗು; ನಿರ್ಣಾಯಕನಾಗು: he ought not to adjudicate as to his own fees ತನ್ನ ರುಸುಮಿನ ಬಗೆಗೆ ತಾನೇ ತೀರ್ಪುಗಾರನಾಗಕೂಡದು.