adhesion ಅಡ್‍ಹೀಷನ್‍
ನಾಮವಾಚಕ
  1. ಅಂಟಿಕೊಳ್ಳುವಿಕೆ; ಹತ್ತಿಕೊಳ್ಳುವಿಕೆ (ರೂಪಕವಾಗಿ ಸಹ).
  2. ಆಸಂಜನ; ಸಂಸಕ್ತಿ:
    1. (ಭೌತವಿಜ್ಞಾನ) ಎರಡು ಕಾಯಗಳ ತಲಗಳು ಸಂಧಿಸುವಾಗ ಅವುಗಳು ಅಂಟಿಕೊಳ್ಳಲು ಕಾರಣವಾದ ಅಣುಗಳ ಪರಸ್ಪರ ಆಕರ್ಷಣೆ.
    2. (ರೋಗಶಾಸ್ತ್ರ) ಊತದಿಂದ ಎರಡು ಮೈಗಳು ಅಂಟಿಕೊಳ್ಳುವುದು.
    3. ಚಕ್ರಗಳು ಮತ್ತು ರಸ್ತೆ ಯಾ ರೈಲುಕಂಬಿಗಳ ನಡುವೆ ಸಂಪರ್ಕವಿರುವುದು.
ನುಡಿಗಟ್ಟು

give one’s adhesion to

  1. ಬೆಂಬಲಿಗನೆಂದು ಹೇಳಿಕೊ; ಅನುಯಾಯಿ ಆಗಿ ಸೇರಿಕೊ.
  2. ಬೆಂಬಲಿಸು.