See also 2address
1address ಅಡ್ರೆಸ್‍
ಸಕರ್ಮಕ ಕ್ರಿಯಾಪದ
  1. (ಅರ್ಜಿ, ಅಭಿಪ್ರಾಯ, ಟೀಕೆ, ಪ್ರತಿಭಟನೆ, ಮೊದಲಾದವನ್ನು ಮುಖತಃ ಯಾ ಲಿಖಿತವಾಗಿ ಸಂಬಂಧಪಟ್ಟ ವ್ಯಕ್ತಿಗೆ) ತಿಳಿಸು; ಹೇಳು: address remarks to ಟೀಕೆಗಳನ್ನು (ಸಂಬಂಧಪಟ್ಟ ವ್ಯಕ್ತಿಗೆ ನೇರವಾಗಿ ಯಾ ಪತ್ರದಲ್ಲಿ) ತಿಳಿಸು. address your complaint to him ನಿನ್ನ ದೂರನ್ನು ಅವನಿಗೆ ಹೇಳು.
  2. (ಪತ್ರ, ಪಾರ್ಸಲ್‍, ಮೊದಲಾದವುಗಳ ಮೇಲೆ) ವಿಳಾಸ ಬರೆ.
  3. (ವ್ಯಕ್ತಿಯನ್ನು, ಸಭೆಯನ್ನು ಉದ್ದೇಶಿಸಿ) ಹೇಳು; ಮಾತನಾಡು; (ಮುಖ್ಯವಾಗಿ) ಭಾಷಣ ಮಾಡು.
  4. (ವ್ಯಕ್ತಿಯನ್ನು, ಸಭೆಯನ್ನು ಉದ್ದೇಶಿಸಿ) ಬರೆ.
  5. (ಹೆಸರು, ಅಧಿಕಾರನಾಮ, ಬಿರುದು, ಮೊದಲಾದವುಗಳಿಂದ ವ್ಯಕ್ತಿಯನ್ನು) ಸಂಬೋಧಿಸು; ಕರೆ.
  6. (ಅಮೆರಿಕನ್‍ ಪ್ರಯೋಗ) ಪ್ರಣಯ ಯಾಚಿಸು; ಒಲವು ಬೇಡು: she accepted him when he addressed her ಆತನು ಪ್ರಣಯ ಯಾಚಿಸಿದಾಗ ಆಕೆ ಆತನನ್ನು ವರಿಸಿದಳು.
  7. (ಗಾಲ್‍ ಆಟದಲ್ಲಿ ಚೆಂಡಿನ ಬೆನ್ನಿಗೆ ಕ್ಲಬ್ಬನ್ನು ಸರಿಯಾಗಿ ಹೊಂದಿಸಿ) ಗುರಿಯಿಟ್ಟು ಹೊಡೆಯಲು ಸಿದ್ಧನಾಗು.
ಪದಗುಚ್ಛ
  1. address oneself to ಸಂಬೋಧಿಸು; (ಸಂಬಂಧಿಸಿದ ವ್ಯಕ್ತಿಗೆ) ಹೇಳು ಯಾ (ಪತ್ರ) ಬರೆ.
  2. address oneself to a task ಕೈಗೊಂಡ ಕಾರ್ಯಕ್ಕೆ ತನ್ನ ಸಕಲ ಶಕ್ತಿಯನ್ನೂ ಹೂಡು, ಪ್ರಯೋಗಿಸು.
See also 1address
2address ಅಡ್ರೆಸ್‍
ನಾಮವಾಚಕ
  1. (ಕಾಗದದ ಮೇಲೆ ಬರೆದ) ವಿಳಾಸ; ಪತ್ತೆ; ಅಡ್ರೆಸ್ಸು:
    1. ವ್ಯಕ್ತಿ ಯಾ ಸಂಸ್ಥೆಗೆ ಕಾಗದ ಮೊದಲಾದವನ್ನು ಕಳುಹಿಸಬೇಕಾದ ಸ್ಥಳದ ಹೆಸರು.
    2. (ವ್ಯಕ್ತಿ) ವಾಸ ಮಾಡುವ ಸ್ಥಳ; ನಿವಾಸ.
  2. (ಸಭೆಯನ್ನು ಉದ್ದೇಶಿಸಿ ಮಾಡಿದ) ಭಾಷಣ; ಉಪನ್ಯಾಸ.
  3. (ಪ್ರಾಚೀನ ಪ್ರಯೋಗ) ಮಾತುಗಾರಿಕೆ; ಮಾತಿನ ರೀತಿ: a man of pleasing address ಸಂತೋಷವನ್ನುಂಟುಮಾಡುವ ಮಾತುಗಾರಿಕೆಯವ.
  4. ಚಾಕಚಕ್ಯತೆ; ಜಾಣ್ಮೆ; ಸಿದ್ಧತೆ; ಕೌಶಲ; ಚಾತುರ್ಯ: handle a task with address ಯಾವುದೇ ಕೆಲಸವನ್ನು ಚಾಕಚಕ್ಯತೆಯಿಂದ ನಿರ್ವಹಿಸು.
  5. ಬಿನ್ನವತ್ತಳೆ; ಬಿನ್ನಹ.
  6. ಮಾನಪತ್ರ; ಅಭಿನಂದನ ಪತ್ರ.
  7. (ಬಹುವಚನ) ಪ್ರಣಯ ಯಾಚನೆ; ಒಲವು ಬೇಡಿಕೆ; ಅನುನಯ: pay one’s address to (ಒಬ್ಬಳ) ಪ್ರಣಯ ಯಾಚಿಸು.
  8. ಗಣಕಯಂತ್ರದ ವಿಳಾಸ; ಗಣಕಯಂತ್ರದಲ್ಲಿ ಮಾಹಿತಿಯಿರುವ ಸ್ಥಾನವನ್ನು ಸೂಚಿಸುವ ಸಂಖ್ಯೆ, ಸಂಕೇತ, ಮೊದಲಾದವು.
  9. ಸಂಬೋಧನೆ: form of address ಸಂಬೋಧನ ಕ್ರಮ, ಒಕ್ಕಣೆ.