See also 2additive
1additive ಆಡಿಟಿವ್‍
ಗುಣವಾಚಕ
  1. ಸೇರಿಸಬೇಕಾದ; ಸೇರಿಸಲಿರುವ; ಸಂಯೋಜನೀಯ.
  2. (ರಸಾಯನವಿಜ್ಞಾನ) ಸೇರಿ(ಸಿ)ಕೊಳ್ಳುವ; ಸೇರಿ(ಸಿ)ಕೊಳ್ಳುತ್ತಾ ಹೋಗುವ; ಸಂಕಲನವಾಗುವ; ಸಂಕಲಿತವಾಗುವ: additive process ಸಂಕಲನ ಪ್ರಕ್ರಿಯೆ.
See also 1additive
2additive ಆಡಿಟಿವ್‍
ನಾಮವಾಚಕ
  1. (ವಸ್ತು ಯಾ ವಿಷಯದಲ್ಲಿ) ಸೇರಿಸಬೇಕಾದುದು; ಸೇರ್ಪಡೆಯಾಗಬೇಕಾದುದು; ಸಂಯೋಜನೀಯ.
  2. ಆಹಾರ ವಸ್ತುಗಳಿಗೆ ಬಣ್ಣ, ವಾಸನೆ, ರುಚಿ, ಮೊದಲಾದ ವಿಶಿಷ್ಟ ಗುಣಗಳನ್ನು ಕೊಡಲು ಅಲ್ಪ ಪ್ರಮಾಣದಲ್ಲಿ ಸೇರಿಸುವ ದ್ರವ.