See also 2action
1action ಆಕ್‍ಷನ್‍
ನಾಮವಾಚಕ
  1. ಕೆಲಸ; ಎಸಕ; ಗೆಯ್ಮೆ; ಕ್ರಿಯೆ; ಕೃತ್ಯ; ಕಾರ್ಯ: men of action ಕಾರ್ಯನಿಷ್ಠ ವ್ಯಕ್ತಿಗಳು. put into action ಕೆಲಸಕ್ಕೆ ಹಚ್ಚು; ಕಾರ್ಯಗತ ಮಾಡು.
  2. (ನಾಟಕ, ಸಿನಿಮಾಗಳಲ್ಲಿ) ಅಭಿನಯ; ಅಂಗ ವಿಕ್ಷೇಪ.
  3. (ನಾಟಕ, ಸಿನಿಮಾಗಳ) ಕಥಾವಸ್ತು; ಕಥೆ; ಘಟನಾವಳಿ.
  4. (ಪಿಯಾನೊ ಯಾ ಬೇರೆ ಯಂತ್ರದ ಯಾ ಯಂತ್ರಭಾಗದ) ಚಲನೆ; ಚಲನ-ರೀತಿ, ಕಾರ್ಯವಿಧಾನ.
  5. ಕಾಳಗ; ಕದನ; ಸೈನಿಕ ಕಾರ್ಯಾಚರಣೆ: killed in action ಕದನದಲ್ಲಿ ಮಡಿದ.
  6. (ನ್ಯಾಯಶಾಸ್ತ್ರ) ದಾವಾ; ಖಟ್ಲೆ; ಮೊಕದ್ದಮೆ; ವ್ಯವಹಾರ; ವ್ಯಾಜ್ಯ.
  7. ಪ್ರಭಾವ; ಪರಿಣಾಮ: action of an acid on metal ಲೋಹದ ಮೇಲೆ ಒಂದು ಆಮ್ಲದ ಪರಿಣಾಮ.
  8. ಮಾಡಿ ಮುಗಿಸಿದ–ಕೆಲಸ, ಕಾರ್ಯ.
  9. (ಅಶಿಷ್ಟ) ಮುಖ್ಯವಾದ ಕಾರ್ಯ ಯಾ ಕೆಲಸ.
  10. (ಆಟಗಾರ, ಕುದುರೆ, ಮೊದಲಾದವುಗಳ) ಶೈಲಿ; ಚಲನ ರೀತಿ; ನಡಗೆಯ ಯಾ ಚಲನೆಯ ರೀತಿ: action of a player ಆಟಗಾರನ ಶೈಲಿ.
ಪದಗುಚ್ಛ
  1. out of action ಕೆಲಸ ಮಾಡದೆ; ಕೆಟ್ಟು ಹೋಗಿ.
  2. take action ಕೆಲಸ ಮಾಡಲು ಶುರುಮಾಡು, ಪ್ರಾರಂಭಿಸು.
ನುಡಿಗಟ್ಟು

go into action ಕೆಲಸ ಪ್ರಾರಂಭಿಸು; ಕಾರ್ಯವನ್ನು ಆರಂಭಿಸು.

See also 1action
2action ಆಕ್‍ಷನ್‍
ಸಕರ್ಮಕ ಕ್ರಿಯಾಪದ

ದಾವಾ ಹಾಕು; ಮೊಕದ್ದಮೆ ಹೂಡು; ಖಟ್ಲೆ ಹಾಕು.