See also 2acid
1acid ಆಸಿಡ್‍
ಗುಣವಾಚಕ
  1. ಹುಳಿಯಾದ.
  2. (ನಡೆ ನುಡಿಗೆ ಸಂಬಂಧಿಸಿದಂತೆ) ಕಟುವಾದ; ತೀಕ್ಷ್ಣವಾದ; ನಿಷ್ಠುರವಾದ: his acid way of dealing with people ಜನರೊಡನೆ ಆತನ ಕಟು ವರ್ತನೆ.
  3. (ರಸಾಯನವಿಜ್ಞಾನ) ಆಮ್ೀಯ; ಆಮ್ಲ ಗುಣದ ಅಂಶ ಹೆಚ್ಚಾಗಿರುವ.
  4. (ಭೂವಿಜ್ಞಾನ) ಆಮ್ಲ-; ಆಮ್ೀಯ; ಸಿಲಿಕಭರಿತವಾದ; ಸಿಲಿಕಭೂಯಿಷ್ಠ: acid rock ಆಮ್ಲಶಿಲೆ.
See also 1acid
2acid ಆಸಿಡ್‍
ನಾಮವಾಚಕ
  1. ಹುಳಿ ಪದಾರ್ಥ.
  2. (ರಸಾಯನವಿಜ್ಞಾನ) ಆಮ್ಲ:
    1. ಲೋಹದ ಪರಮಾಣುಗಳಿಂದ ಸ್ಥಳಾಂತರಿಸಬಹುದಾದ ಹೈಡ್ರೊಜನ್‍ ಪರಮಾಣುಗಳುಳ್ಳ ಮತ್ತು ನೀರಿನಲ್ಲಿ ಕರಗಿದಾಗ ಹೈಡ್ರೊಜನ್‍ ಅಯಾನುಗಳನ್ನು ಕೊಡಬಲ್ಲ ಸಂಯುಕ್ತ.
    2. (ಲೌರಿ ಮತ್ತು ಬ್ರಾನ್‍ಸ್ಟೆಡ್‍ ಅವರ ಪ್ರಕಾರ) ಪ್ರೋಟಾನುದಾನಿ.
    3. (ಲೂಯಿಸ್‍ ಪ್ರಕಾರ) ಇಲೆಕ್ಟ್ರಾನು ಜೋಡಿಯನ್ನು ಸ್ವೀಕರಿಸುವಂಥದು.
  3. ತೀಕ್ಷ್ಣ ಯಾ ಕಟು ನುಡಿ, ಬರಹ ಇತ್ಯಾದಿ: he has nothing but acid to offer as criticism ಕಟುನುಡಿ ವಿನಾ ಅವನ ವಿಮರ್ಶೆಯಲ್ಲಿ ಇನ್ನೇನೂ ಇಲ್ಲ.
  4. (ಅಶಿಷ್ಟ) ಲೈಸರ್ಜಿಕ್‍ ಆಸಿಡ್‍ ಡೈತೆಲಮೈಡ್‍ (LSD) ಮಾದಕ ವಸ್ತು.
ನುಡಿಗಟ್ಟು

put the acid on (ಆಸ್ಟ್ರೇಲಿಯ, ಅಶಿಷ್ಟ) (ಯಾರಿಂದಲೇ ಸಾಲ, ಅನುಗ್ರಹ, ಮೊದಲಾದವನ್ನು ಬಲವಂತವಾಗಿ) ಪೀಕು; ಕೀಳು; ಸೆಳೆ.