accumulation ಅಕ್ಯೂಮ್ಯುಲೇಷನ್‍
ನಾಮವಾಚಕ
  1. (ಐಶ್ವರ್ಯ, ಹಣ, ಮೊದಲಾದವುಗಳ ವಿಷಯದಲ್ಲಿ ರೂಪಕವಾಗಿ ಸಹ) ಒಟ್ಟಿಲು; ಒಡ್ಡು; ಸಂಚಯ; ಶೇಖರಣೆ; ಸಂಗ್ರಹಣೆ; ಕೂಡಹಾಕುವಿಕೆ; ರಾಶಿಗೂಡುವಿಕೆ.
  2. (ಬಡ್ಡಿ ಸೇರುವುದರಿಂದ ಆದ) ಬಂಡವಾಳ ಕೂಡಿಕೆ, ಶೇಖರಣೆ.
  3. (ಇಂಗ್ಲಿಷ್‍ ವಿಶ್ವವಿದ್ಯಾನಿಲಯದ ಬೇರೆ ಬೇರೆ ಪದವೀಸ್ವೀಕಾರ, ಚರ್ಚಿನ ಬೇರೆ ಬೇರೆ ಸೇವಾಕಾರ್ಯಗಳು, ಮೊದಲಾದವುಗಳ ವಿಷಯದಲ್ಲಿ) ವಿಭಿನ್ನ ಕ್ರಿಯೆಗಳನ್ನು ಒಟ್ಟಿಗೆ ಮಾಡುವುದು.
  4. (ಕ್ರಮೇಣ ಶೇಖರವಾದ ಕಾಗದ, ಹಿಮ, ಆಸ್ತಿ, ಮೊದಲಾದವುಗಳ) ಒಟ್ಟಿಲು; ಒಡ್ಡು; ಸಂಚಯ.