according ಅಕಾರ್ಡಿಂಗ್‍
ಕ್ರಿಯಾವಿಶೇಷಣ
ಪದಗುಚ್ಛ
  1. according as
    1. (ಇನ್ನೊಂದನ್ನು ಅನುಸರಿಸಿ ವ್ಯತ್ಯಾಸವಾಗುವ ಪ್ರಕ್ರಿಯೆಯ ವಿಷಯದಲ್ಲಿ) ಆ ಪ್ರಮಾಣದಲ್ಲಿ; (ಅದಕ್ಕೆ) ತಕ್ಕ ಪ್ರಮಾಣದಲ್ಲಿ; ಅಷ್ಟು ಪ್ರಮಾಣದಲ್ಲಿ; ತಕ್ಕಂತೆ: you will get according as you give ನೀನು ಕೊಟ್ಟ ಪ್ರಮಾಣದಲ್ಲಿ ನಿನಗೆ ಸಿಕ್ಕುತ್ತದೆ.
    2. ತಕ್ಕಂತೆ; ಅನುಗುಣವಾಗಿ; ಅನುಸಾರವಾಗಿ; ಅವಲಂಬಿಸಿ; ನಿರ್ದಿಷ್ಟ ವಿಕಲ್ಪಗಳಲ್ಲಿ ಯಾವುದು ಸರಿ ಎಂಬುದನ್ನು ಅವಲಂಬಿಸಿರುವ ರೀತಿಯಲ್ಲಿ.
  2. according to
    1. ಅಂತೆ; ಅನುಗುಣವಾಗಿ; ಅನುಸಾರವಾಗಿ; ಅದರಂತೆ; ಅದರ ಹಾಗೆ: according to the time-table ವೇಳಾಪಟ್ಟಿಯಂತೆ; ವೇಳಾಪಟ್ಟಿಗೆ ಅನುಸಾರವಾಗಿ.
    2. ತಿಳಿಸಲಾಗಿರುವಂತೆ; ಹೇಳಿರುವಂತೆ; ನಿರೂಪಿಸಿರುವಂತೆ.