accompany ಅಕಂಪನಿ
ಸಕರ್ಮಕ ಕ್ರಿಯಾಪದ
  1. (ಯಾವುದೇ ಒಂದಕ್ಕೆ) ಹೆಚ್ಚಿಗೆ ಸೇರಿಸು; ಜೊತೆಗೆ ಸೇರಿಸು; ಜೊತೆಗೂಡಿಸು: accompany the word with a blow ಮಾತಿನ ಜೊತೆಗೆ ಏಟು ಸೇರಿಸು.
  2. (ವಸ್ತುಗಳ ವಿಷಯದಲ್ಲಿ) ಒಂದಿಗಿರು; ಜೊತೆಯಲ್ಲಿರು; ಒಡಗೂಡಿರು; ಜೊತೆಯಲ್ಲಿ ಸಿಗು ಯಾ ದೊರಕು.
  3. ಜೊತೆಗೆ ಹೋಗು.
  4. ಪಕ್ಕವಾದ್ಯ ನುಡಿಸು ಯಾ ದನಿಗೂಡಿಸಿ ಹಾಡು.
  5. (ಮರ್ಯಾದೆಗಾಗಿ ಯಾ ರಕ್ಷಣೆಗಾಗಿ) ಬೆಂಗಾವಲಾಗಿರು.