acclimatize ಅಕ್ಲೈಮಟೈಸ್‍
ಸಕರ್ಮಕ ಕ್ರಿಯಾಪದ
  1. ಹೊಂದಿಸು; ಒಗ್ಗಿಸು; ಪಳಗಿಸು; ಹೊಸ ಸನ್ನಿವೇಶಕ್ಕೆ ಯಾ ವಾಯುಗುಣಕ್ಕೆ ಹೊಂದಿಕೊಳ್ಳುವಂತೆ ಮಾಡು.
  2. (ರಸಾಯನವಿಜ್ಞಾನ) ಕಲಿಲ (ಕಲಾಯ್ಡ್‍) ದ್ರಾವಣಕ್ಕೆ ಒಂದು ಗರಣೆಕಾರಿಯನ್ನು ಸ್ವಲ್ಪ ಸ್ವಲ್ಪವಾಗಿ ಹಾಕುತ್ತಾ ಹೋಗುವುದರ ಮೂಲಕ ಆ ದ್ರಾವಣದ ಸ್ಥಿರತೆಯನ್ನು ಹೆಚ್ಚಿಸು.
ಅಕರ್ಮಕ ಕ್ರಿಯಾಪದ

(ಹೊಸ ವಾಯುಗುಣಕ್ಕೆ ಯಾ ಸನ್ನಿವೇಶಕ್ಕೆ) ಒಗ್ಗಿಕೊ; ಹೊಂದಿಕೊ.