See also 2accent
1accent ಆಕ್ಸೆಂ(ಕ್ಸಂ)ಟ್‍
ನಾಮವಾಚಕ
  1. ಒತ್ತು; ಬಲ; ಘಾತ; ಪದೋಚ್ಚಾರಣೆಯಲ್ಲಿ ಒಂದು ವರ್ಣಕ್ಕೆ ಕೊಡುವ ಪ್ರಾಧಾನ್ಯ.
  2. (ಛಂದಸ್ಸು) ಒತ್ತು ಚಿಹ್ನೆ; ಘಾತಚಿಹ್ನೆ; ($’$).
  3. (ವ್ಯಕ್ತಿಯ, ಪ್ರದೇಶದ ಯಾ ರಾಷ್ಟ್ರದ) ಉಚ್ಚಾರಣಾ–ರೀತಿ, ಶೈಲಿ.
  4. ವಿವಿಧ ಭಾವಗಳನ್ನು ಪ್ರಕಟಪಡಿಸಲು ಉಚ್ಚಾರಣೆಯಲ್ಲಿ ಮಾಡುವ ಏರಿಳಿತ.
  5. (ಬಹುವಚನ) (ಕಾವ್ಯಪ್ರಯೋಗ) ಭಾಷೆ : accents yet unknown ಇನ್ನೂ ಹುಟ್ಟಿಲ್ಲದ ಭಾಷೆಗಳು; ಮುಂದೆ ಹುಟ್ಟುವ ಭಾಷೆಗಳು.
  6. (ಬಹುವಚನ) ಮಾತು; ನುಡಿ; ಮಾತಿನ ರೀತಿ: in the tender accents of lover ಪ್ರೇಮದ ಮೃದುನುಡಿಗಳಲ್ಲಿ.
  7. (ಲಯಾನುಸಾರವಾಗಿ ಪದ್ಯದಲ್ಲಿ ಯಾ ಗದ್ಯದಲ್ಲಿ ಉಚ್ಚಾರಾಂಶಗಳ ಮೇಲೆ ಹಾಕುವ) ಒತ್ತು; ಘಾತ.
  8. (ಸಂಗೀತ) (ನಿಯತವೋ ಅನಿಯತವೋ ಆದ ಅವಧಿಗಳಲ್ಲಿ ಆವರ್ತನವಾಗುವ) ಒತ್ತು; ಘಾತ.
  9. ತೀವ್ರತೆ; ತೀಕ್ಷ್ಣತೆ: the accent of the blow ಏಟಿನ ತೀವ್ರತೆ.
  10. ವೈಶಿಷ್ಟ್ಯ; ವಿಶಿಷ್ಟತೆ: these are the accents of honour in the German services ಜರ್ಮನಿಯ ಸೇನಾ ಖಾತೆಗಳಲ್ಲಿ ಇವು ಗೌರವದ ವೈಶಿಷ್ಟ್ಯಗಳು.
  11. ಪ್ರಾಧಾನ್ಯ; ಪ್ರಾಮುಖ್ಯ; ಮಹತ್ವ: the accent of practical work in teaching science ವಿಜ್ಞಾನದ ಬೋಧನೆಯಲ್ಲಿ ಪ್ರಯೋಗಕ್ಕೆ ಕೊಡುವ ಪ್ರಾಮುಖ್ಯ.
  12. (ಕಲೆ) ವೈದೃಶ್ಯ; ವಿಲಕ್ಷಣಾಂಶ; ವೈಲಕ್ಷಣ್ಯ; ಹೋಲಿಕೆಯಿಲ್ಲದಿರುವ ವಿವರ; ಒಂದು ರಚನೆಯ ಆಕಾರ ವಿಶೇಷಗಳನ್ನು ಎತ್ತಿ ತೋರಿಸುವ ಯಾ ವರ್ಣ ವಿನ್ಯಾಸವೊಂದರಲ್ಲಿ ಭೇದ ತೋರಿಸುವ ಬಣ್ಣದ ಯಾ ಬೆಳಕಿನ ಅಂಶ: an accent of light on the neck ಕತ್ತಿನ ಮೇಲೆ ಎದ್ದು ಕಾಣುವ ಬೆಳಕಿನ ವಿವರ. an eye which discerns at a glance where the accents of a building lie ಕಟ್ಟಡದ ವಿಲಕ್ಷಣಾಂಶಗಳು ಎಲ್ಲಿವೆ ಎಂಬುದನ್ನು ಒಂದು ನೋಟದಲ್ಲಿ ಗ್ರಹಿಸುವ ಕಣ್ಣು.
  13. (ರೂಪಕವಾಗಿ) ಛಾಯೆ; ರುಚಿ; ವಾಸನೆ; ಎಲೆ; ಸ್ಪಷ್ಟವಾಗಿ ಗೋಚರಿಸುವ ಆದರೆ ಗೌಣವಾಗಿರುವ ವಿನ್ಯಾಸ, ಬಣ್ಣ, ರುಚಿ, ಮೊದಲಾದವು: the salad dressing had an accent of garlic ಕೋಸಂಬರಿಯಲ್ಲಿ ಬೆಳ್ಳುಳ್ಳಿಯ ವಾಸನೆ ಇತ್ತು.
See also 1accent
2accent ಆ(ಅ)ಕ್ಸೆಂಟ್‍
ಸಕರ್ಮಕ ಕ್ರಿಯಾಪದ
  1. (ಪದವನ್ನು ಉಚ್ಚಾರಾಂಶವನ್ನು) ಎತ್ತರಿಸು; ಒತ್ತಿ ಉಚ್ಚರಿಸು.
  2. ಒತ್ತು ಚಿಹ್ನೆ ಹಾಕು; ಘಾತಚಿಹ್ನೆ ಹಾಕು.
  3. (ರೂಪಕವಾಗಿ) ಎದ್ದು ಕಾಣುವಂತೆ ಮಾಡು; ಸ್ಫುಟಗೊಳಿಸು: the brown colour accents mountains on the map ಕಂದು ಬಣ್ಣವು ನಕ್ಷೆಯಲ್ಲಿ ಪರ್ವತಗಳನ್ನು ಎದ್ದು ಕಾಣುವಂತೆ ಮಾಡಿದೆ.
  4. ಹೆಚ್ಚಿಸು; ತೀವ್ರಗೊಳಿಸು; ಅಧಿಕಗೊಳಿಸು: the incident accented the antagonism between the two countries ಆ ಘಟನೆ ಎರಡು ದೇಶಗಳ ನಡುವಣ ವೈಷಮ್ಯವನ್ನು ತೀವ್ರಗೊಳಿಸಿತು.
  5. ಪ್ರಾಮುಖ್ಯ ನೀಡು; ಮಹತ್ವ ಕೊಡು: the development programme accents rural electrification ಅಭಿವೃದ್ಧಿ ಯೋಜನೆಯು ಗ್ರಾಮಾಂತರ ಪ್ರದೇಶಗಳ ವಿದ್ಯುದೀಕರಣಕ್ಕೆ ಮಹತ್ವಕೊಡುತ್ತದೆ.