accelerator ಆ(ಅ)ಕ್ಸೆಲರೇಟರ್‍
ನಾಮವಾಚಕ
  1. ವೇಗವರ್ಧಕ:
    1. (ರಸಾಯನವಿಜ್ಞಾನ) ಯಾವುದಾದರೂ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಕರ್ತೃ, ಉದಾಹರಣೆಗೆ ಛಾಯಾ ಚಿತ್ರ ಸ್ಫುಟೀಕರಣವನ್ನು ತ್ವರಿತಗೊಳಿಸಬಲ್ಲ ರಾಸಾಯನಿಕ.
    2. ದೇಹಕ್ರಿಯೆಗಳನ್ನು ತ್ವರಿತಗೊಳಿಸುವ ನರಗಳು ಯಾ ಸ್ನಾಯು.
    3. (ಮುಖ್ಯವಾಗಿ) ಮೋಟಾರು ವಾಹನದ ವೇಗವನ್ನು ಹೆಚ್ಚಿಸಲು ಬಳಸುವ ಸಾಧನ.
  2. (ಭೌತವಿಜ್ಞಾನ) ವೇಗೋತ್ಕರ್ಷಕ; (ಇಲೆಕ್ಟ್ರಾನ್‍, ಪ್ರೋಟಾನ್‍, ಮೊದಲಾದ) ವಿದ್ಯುದಾವಿಷ್ಟ ಕಣಗಳನ್ನು ಉತ್ಪತ್ತಿ ಮಾಡಿ ಅವುಗಳನ್ನು ನಿಯಂತ್ರಿತ ಪಥದಲ್ಲಿ ವೇಗೋತ್ಕರ್ಷಕ್ಕೊಳಪಡಿಸಿ ಅವು ಅತ್ಯಧಿಕ ವೇಗಪೂರಿತ ಕ್ಷೇಪಕಗಳಾಗಿ ಹೊರಡುವಂತೆ ಮಾಡುವ ಸಾಧನ.