acceleration ಆ(ಅ)ಕ್ಸೆಲರೇಷನ್‍
ನಾಮವಾಚಕ
  1. ವೇಗವರ್ಧನ; ಗತಿವೃದ್ಧಿ; ತ್ವರಣ; ವೇಗ ಹೆಚ್ಚಿಸುವ, ತ್ವರಿತಗೊಳಿಸುವ ಕ್ರಿಯೆ ಯಾ ಪ್ರಕ್ರಿಯೆ.
  2. ತ್ವರಿತ ಸ್ಥಿತಿ; ವೇಗ ಹೆಚ್ಚಿಸಿದ ಸ್ಥಿತಿ.
  3. (ವಾಹನದ ವಿಷಯದಲ್ಲಿ) ವೇಗಸಾಮರ್ಥ್ಯ; ವೇಗವನ್ನು ಹೆಚ್ಚಿಸಿಕೊಳ್ಳುವ ಶಕ್ತಿ.
  4. (ಭೌತವಿಜ್ಞಾನ) ವೇಗೋತ್ಕರ್ಷ; ವೇಗವು ವ್ಯತ್ಯಾಸಹೊಂದುವ ದರ.
  5. (ಅರ್ಥಶಾಸ್ತ್ರ) ಬಂಡವಾಳ ಸರಕು ಬೇಡಿಕೆ ಉತ್ಕರ್ಷ; ಕೈಗಾರಿಕೆಗಳ ಯಾವುದೇ ಉತ್ಪನ್ನಕ್ಕೆ ಬೇಡಿಕೆ ಹೆಚ್ಚಾದರೆ ಅದರ ಉತ್ಪಾದನೆಗೆ ಬೇಕಾಗುವ ಬಂಡವಾಳ ಸರಕುಗಳಿಗೆ ಬೇಡಿಕೆ ಅದಕ್ಕೆ ಅನುಗುಣವಾಗಿ ಹೆಚ್ಚುತ್ತದೆ ಎಂಬ ಅರ್ಥಶಾಸ್ತ್ರೀಯ ತತ್ತ್ವ.
ಪದಗುಚ್ಛ

angular acceleration ಕೋನ ವೇಗೋತ್ಕರ್ಷ; ಕೋನವೇಗವು ವ್ಯತ್ಯಾಸವಾಗುವ ದರ.