accelerate ಆ(ಅ)ಕ್ಸೆಲರೇಟ್‍
ಸಕರ್ಮಕ ಕ್ರಿಯಾಪದ
  1. ವೇಗಹೆಚ್ಚಿಸು; ತ್ವರೆಗೊಳಿಸು.
  2. (ಬೆಳವಣಿಗೆ, ಪ್ರಗತಿ, ಕೆಲಸ, ಪ್ರಕ್ರಿಯೆ, ಮೊದಲಾದವುಗಳನ್ನು) ಚುರುಕುಗೊಳಿಸು; ತ್ವರಿತಗೊಳಿಸು; ಬೇಗ ಆಗುವಂತೆ ಮಾಡು: the course of lectures was accelerated ಉಪನ್ಯಾಸ ಮಾಲೆಯನ್ನು ತ್ವರಿತಗೊಳಿಸಲಾಯಿತು.
  3. (ಭೌತವಿಜ್ಞಾನ) ವೇಗೋತ್ಕರ್ಷಿಸು; ಒಂದು ಕಾಯದ ವೇಗವನ್ನು ಅಧಿಕಗೊಳಿಸು.
ಅಕರ್ಮಕ ಕ್ರಿಯಾಪದ
  1. (ಚಲನೆಯ ಯಾ ಪ್ರಕ್ರಿಯೆಯ ವಿಷಯದಲ್ಲಿ) ತ್ವರೆಗೊಳ್ಳು; ಚುರುಕುಗೊಳ್ಳು; ವೇಗವೃದ್ಧಿಹೊಂದು.
  2. ಬೇಗ ಆಗಲು ಯಾ ಚಲಿಸಲು ಪ್ರಾರಂಭಿಸು.