abortive ಅಬಾರ್ಟಿವ್‍
ಗುಣವಾಚಕ
  1. (ವೈದ್ಯಶಾಸ್ತ್ರ) ಮೈಯಿಳಿಸುವ; ಗರ್ಭಪಾತ ಮಾಡಿಸುವ.
  2. ಅಕಾಲಿಕ; ಕಾಲಕ್ಕೆ ಮುಂಚೆ ಹುಟ್ಟುವ, ಸಂಭವಿಸುವ.
  3. (ಜೀವವಿಜ್ಞಾನ) (ಅಂಗಾಂಗ ಮೊದಲಾದವುಗಳ ವಿಷಯದಲ್ಲಿ) ಅಪೂರ್ಣಾವಸ್ಥೆಯ; ಅಂಕುರಾವಸ್ಥೆಯ; ಕುಂಠಿತ ಬೆಳವಣಿಗೆಯ.
  4. (ಕಾರ್ಯ, ಯೋಜನೆ, ಮೊದಲಾದವುಗಳ ವಿಷಯದಲ್ಲಿ) ಕೈಗೂಡದ; ವಿಫಲ; ವ್ಯರ್ಥ; ಅಯಶಸ್ವಿ.