ability ಅಬಿಲಿಟಿ
ನಾಮವಾಚಕ
  1. (ಯಾವುದೇ ಕೆಲಸ ಮಾಡಲು ಸಾಕಷ್ಟು ದೈಹಿಕ, ನೈತಿಕ, ಆರ್ಥಿಕ, ಮೊದಲಾದ) ಶಕ್ತಿ; ಅಳವು; ಆಪು; ಸಾಮರ್ಥ್ಯ.
  2. (ಕಾನೂನುರೀತ್ಯಾ ಕ್ರಮ ಜರುಗಿಸಲು ಬೇಕಾಗಿರುವ) ಅರ್ಹತೆ; ಯೋಗ್ಯತೆ.
  3. (ಸಹಜವಾಗಿ ಯಾ ಅಭ್ಯಾಸದಿಂದ ಬಂದ) ಶಕ್ತಿ; ಸಾಮರ್ಥ್ಯ.
  4. ಜಾಣ್ಮೆ; ಜಾಣತನ; ಬುದ್ಧಿವಂತಿಕೆ: a man of great ability ಬಹಳ ಬುದ್ಧಿಶಾಲಿ (ವ್ಯಕ್ತಿ).
  5. (ಬಹುವಚನ) ಬುದ್ಧಿಶಕ್ತಿ: a man of great abilities ಬಹಳ ಬುದ್ಧಿಶಕ್ತಿಯುಳ್ಳ ವ್ಯಕ್ತಿ.
  6. (ಬಹುವಚನ) ಕೌಶಲ; ಚಾತುರ್ಯ; ವಿಶೇಷವಾದ ನೈಪುಣ್ಯ ಯಾ ಸಾಮರ್ಥ್ಯ: his manifold abilities ಅವನ ಬಹುವಿಧ ನೈಪುಣ್ಯಗಳು.