aberration ಆಬರೇಷನ್‍
ನಾಮವಾಚಕ
  1. ದಾರಿ ತಪ್ಪುವಿಕೆ; ಮಾರ್ಗಚ್ಯುತಿ; ಪಥಭ್ರಂಶ (ರೂಪಕವಾಗಿ ಸಹ).
  2. ನಿಯಮಭಂಗ; ನಿಯಮೋಲ್ಲಂಘನ.
  3. ನೀತಿಗೆಡುವಿಕೆ; ನೀತಿಭ್ರಂಶ.
  4. ಬುದ್ಧಿಭ್ರಮಣೆ; ಬುದ್ಧಿವಿಕಲ್ಪ.
  5. ಕ್ಷಣಿಕ–ಮರವೆ, ವಿಸ್ಮೃತಿ; ತಾತ್ಕಾಲಿಕ ಮರೆವು.
  6. ಅಪವಾದ(ವಾಗಿರುವಿಕೆ); ಸಾಮಾನ್ಯ ಮಾದರಿಗಿಂತ ಬೇರೆಯಾಗಿರುವಿಕೆ.
  7. (ಭೌತವಿಜ್ಞಾನ) ವಿಪಥನ; ಬಿಂಬ ಪ್ರತಿಬಿಂಬ ನಿರ್ಮಾಣದಲ್ಲಿ ಬಿಂದುವಿಗೆ ಬಿಂದು ಹೊಂದದಿರುವುದು: spherical aberration ಗೋಳವಿಪಥನ. chromatic aberration ವರ್ಣವಿಪಥನ.
  8. (ಖಗೋಳ ವಿಜ್ಞಾನ) ದಿಗ್‍ಭ್ರಂಶ; ದಿಕ್ಚ್ಯುತಿ; ಸ್ಥಾನಭ್ರಮೆ; ಭೂಮಿಯ ಚಲನೆಯ ಕಾರಣವಾಗಿ ವೀಕ್ಷಕನ ಸ್ಥಾನ ಬದಲಾಯಿಸುವುದರಿಂದಲೂ ಬೆಳಕಿನ ಕಿರಣಗಳು ಭೂಮಿಯನ್ನು ತಲುಪಲು ಕಾಲ ಬೇಕಾಗಿರುವುದರಿಂದಲೂ ಯಾವುದಾದರೂ ಒಂದು ಆಕಾಶಕಾಯ ತಾನಿದ್ದ ಸ್ಥಳದಲ್ಲಿ ಕಾಣದೆ ಬೇರೆ ಕಡೆಯಲ್ಲಿ ಕಾಣುವುದು.