abduct ಆ(ಅ)ಬ್ಡಕ್ಟ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಮಗು ಯಾ ಹೆಂಗಸನ್ನು) ಹಾರಿಸು; ಎಗರಿಸು; ಅಪಹರಿಸು; ಎತ್ತಿಕೊಂಡು ಹೋಗು; ಮೋಸದಿಂದಾಗಲಿ ಬಲಾತ್ಕಾರದಿಂದಾಗಲಿ ಹಾರಿಸಿಕೊಂಡು ಹೋಗು.
  2. (ಶರೀರ ವಿಜ್ಞಾನ) ಅಪಚಾಲಿಸು; ಒಂದು ಅಂಗವನ್ನು ಅದರ ನಿಯತ ಅಕ್ಷಸ್ಥಾನದಿಂದ ಆಚೆಗೆ ಎಳೆ, ಸೆಳೆ.