WHO
ಸಂಕ್ಷಿಪ್ತ

World Health Organization.

who ಹೂ
ಸರ್ವನಾಮ

(ದ್ವಿತಿಯಾ ವಿಭಕ್ತಿ whom ಉಚ್ಚಾರಣೆ ಹೂಮ್‍ ಯಾ ಆಡುಮಾತುwho ಉಚ್ಚಾರಣೆ ಹೂ; ಷಷ್ಠೀವಿಭಕ್ತಿ whose ಉಚ್ಚಾರಣೆ ಹೂಸ್‍).

  1. (ಪ್ರಶ್ನಾರ್ಥಕ)
    1. ಯಾರು? ಯಾವನು? ಯಾವಳು?: who said so? ಹಾಗೆ ಹೇಳಿದವರು ಯಾರು? who would have thought of it? (ಯಾರೂ ಅದನ್ನು ಯೋಚಿಸುತ್ತಿರಲಿಲ್ಲ ಎಂಬ ಅರ್ಥದಲ್ಲಿ) ಯಾರು ತಾನೇ ಅದನ್ನು ಯೋಚಿಸುತ್ತಿದ್ದರು? whom or who did you see? ನೀನು ಯಾರನ್ನು ನೋಡಿದೆ?
    2. ಯಾರು? ಎಂಥವನು? ಎಂಥವಳು? ಎಂಥವರು?: who am I to object? ಆಕ್ಷೇಪಿಸಲು ನಾನು ಯಾರು? (ನನಗೇನು ಹಕ್ಕು?)
  2. (ನಿಷೇಧಸೂಚಕ ಪ್ರಶ್ನೆಯಾಗಿ) who would have thought of it? ಹಾಗೆಂದು ಯಾರು ತಾನೇ ಯೋಚಿಸಿದ್ದರು?
  3. ಆ (ವ್ಯಕ್ತಿ); ಅಂಥ ವ್ಯಕ್ತಿ: any one who wishes can come ಯಾರು ಬರಲು ಇಚ್ಫಿಸುತ್ತಾರೋ ಅವರು ಬರಬಹುದು. the woman who you met? ನೀನು ಭೇಟಿಮಾಡಿದ ಹೆಂಗಸು. the man who you saw ನೀನು ನೋಡಿದ ವ್ಯಕ್ತಿ (ಕೊನೆಯ ಎರಡು ಉದಾಹರಣೆಗಳಲ್ಲಿ whom ಸರಿಯಾದ ಪ್ರಯೋಗ, ಆದರೆ ಸಾಮಾನ್ಯ ಸಂದರ್ಭಗಳಲ್ಲಿ who ಎಂದು ಪ್ರಯೋಗ).
  4. ಮತ್ತು ಯಾ ಆದರೆ ಅವನು, ಅವಳು, ಅವರು, ಮೊದಲಾದ: sent it to Ram, who gave it to Lakshman ಅದನ್ನು ರಾಮನಿಗೆ ಕಳುಹಿಸಿದ, ಮತ್ತು (ಯಾ ಆದರೆ) ಅವನು ಅದನ್ನು ಲಕ್ಷ್ಮಣನಿಗೆ ಕೊಟ್ಟ.
  5. (ಪ್ರಾಚೀನ ಪ್ರಯೋಗ) ಯಾರು; ಯಾರೇ ಆಗಲಿ; ಯಾವುದೇ ವ್ಯಕ್ತಿ; ಯಾವನು(ಳು): who steals my purse steals trash ಯಾರು ನನ್ನ ‘ ಪರ್ಸ’ ನ್ನು ಕದಿಯುವರೋ ಅವರು ಕೆಲಸಕ್ಕೆ ಬಾರದ್ದನ್ನು ಕದ್ದಹಾಗೆ ಲೆಕ್ಕ (ಯಾರಾದರೂ ನನ್ನ ಹಣ ಕದ್ದರೆ ನನಗೇನೂ ನಷ್ಟವಿಲ್ಲ ಎಂಬರ್ಥದಲ್ಲಿ). whom the gods love die young ಯಾರ ಮೇಲೆ ದೇವರ ಕೃಪೆ ಇದೆಯೋ ಅಂಥವರು ಚಿಕ್ಕ ವಯಸ್ಸಿನಲ್ಲೇ (ಬೇಗ) ಸಾಯುತ್ತಾರೆ.
ಪದಗುಚ್ಛ
  1. as who should say ಹಾಗೆಂದು ಹೇಳಿದವನ ರೀತಿಯಲ್ಲಿ; ಯಾರೋ ಹಾಗೆ ಹೇಳಿದರೆಂಬಂತೆ.
  2. who-does-what dispute or strike (ಜಗಳ, ವಿವಾದ, ಸಂಪು, ಮೊದಲಾದವುಗಳ ವಿಷಯದಲ್ಲಿ) ಯಾರು ಯಾವುದನ್ನು ಮಾಡಬೇಕು ಎನ್ನುವುದು; ಯಾರ ಕೆಲಸ ಏನು ಎನ್ನುವುದು.
  3. who goes there? = go ( ಪದಗುಚ್ಛ 67).
  4. who is it (ಹೆಸರು ನೆನಪಾಗದಿರುವಾಗ) ಅದು ಯಾರೋ ಒಬ್ಬರು.