TAB
ಸಂಕ್ಷಿಪ್ತ
  1. typhoid-paratyphoid A and B vaccine.
  2. (ಆಸ್ಟ್ರೇಲಿಯ) Totalizator Agency Board.
See also 2tab  3tab
1tab ಟ್ಯಾಬ್‍
ನಾಮವಾಚಕ
  1. (ಏನನ್ನಾದರೂ ಹಿಡಿದುಕೊಳ್ಳಲು, ಗುರುತಿಸಲು ಯಾ ತೂಗಹಾಕಲು ಸೇರಿಸಿದ) ಮುಚ್ಚಿಕೆಪಟ್ಟಿ; ತೂಗು ಪಟ್ಟಿ; ಗುರುತುಪಟ್ಟಿ; ಬಿಗಿಪಟ್ಟಿ.
  2. (ಉಡುಪು ಮೊದಲಾದವುಗಳಿಗೆ ಸೇರಿಸಿದ ಅಂಥದೇ) ಪಟ್ಟಿ.
  3. (ಬ್ರಿಟಿಷ್‍ ಪ್ರಯೋಗ) (ಸೈನ್ಯ) ಸಹಾಯಕ ಅಧಿಕಾರಿಯ ಲಾಂಛನವಾದ ಕೊರಪಟ್ಟಿಯ ಮೇಲಿನ ಗುರುತು ಪಟ್ಟಿ.
    1. ರಂಗಪರದೆ.
    2. ರಂಗಪರದೆಯನ್ನು ತೂಗುಹಾಕುವ ಕುಣಿಕೆ.
  4. ಲೆಕ್ಕ; ಲೆಕ್ಕಾಚಾರ; ಲೆಕ್ಕದ ತಾಳೆ.
  5. (ಅಮೆರಿಕನ್‍ ಪ್ರಯೋಗ)(ಆಡುಮಾತು) ಬೆಲೆ ಚೀಟಿ; ದರದ ಪಟ್ಟಿ; ಬೆಲೆ ಯಾ ಲೆಕ್ಕದ ತಪಶೀಲು ಪಟ್ಟಿ.
ಪದಗುಚ್ಛ

keep tabs (or a tab) on (ಆಡುಮಾತು)

  1. (ಯಾವುದರದೇ) ಲೆಕ್ಕ ಇಡು; ತಪಶೀಲು ದಾಖಲಿಸು.
  2. (ಯಾವುದರದೇ ಮೇಲೆ) ಕಣ್ಣಿಡು; ಗಮನವಿಡು; ಎಚ್ಚರವಹಿಸು.
See also 1tab  3tab
2tab ಟ್ಯಾಬ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ tabbed, ವರ್ತಮಾನ ಕೃದಂತ tabbing).

ಪಟ್ಟಿ ಯಾ ಪಟ್ಟಿಗಳನ್ನು–ಹಚ್ಚು, ಲಗತ್ತಿಸು, ಒದಗಿಸು.

See also 1tab  2tab
3tab ಟ್ಯಾಬ್‍
ನಾಮವಾಚಕ