Rubicon ರೂಬಿಕಾನ್‍
ನಾಮವಾಚಕ
  1. (ರೋಮ್‍ ಪಟ್ಟಣದ ಆಕ್ರಮಣಕ್ಕೆ ನಿಶ್ಚಯಿಸಿ ಜೂಲಿಯಸ್‍ ಸೀಸರ್‍ ತನ್ನ ಪ್ರಾಂತದ ಎಲ್ಲೆಯಾದ ರೂಬಿಕನ್‍ ನದಿಯನ್ನು ದಾಟಿದಂತೆ) ಯಾವ ಎಲ್ಲೆಯನ್ನು ದಾಟಿದರೆ ಒಂದು ಸಾಹಸ ಪ್ರಯತ್ನದಿಂದ ಹಿಮ್ಮೆಟ್ಟುವುದು ಸಾಧ್ಯವಿಲ್ಲವೋ ಅಂಥ ಎಲ್ಲೆ.
  2. ಎಲ್ಲೆ; ಮೇರೆ; ಗಡಿ(ರೂಪಕವಾಗಿ ಸಹ).
  3. (rubicon, ಇಬ್ಬರಾಡುವ ‘ಪಿಕೆಟ್‍’ ಎಂಬ ಇಸ್ಪೀಟಾಟದಲ್ಲಿ) ಎದುರಾಳಿ 100 ಗೆಲ್ಲಂಕಗಳನ್ನು ಪಡೆಯುವುದಕ್ಕೆ ಮುಂಚೆ ಆಟವನ್ನು ಗೆಲ್ಲುವುದು.
ಪದಗುಚ್ಛ

cross the Rubicon ಹಿಮ್ಮೆಟ್ಟಲಾಗದಂತೆ ಮುಂದಡಿ ಇಟ್ಟುಬಿಡು; ಹಿಂದೆಗೆಯಲಾರದಂತೆ, ಹೆಜ್ಜೆ ಹಿಂದಿಡಲಾಗದಂತೆ ಯಾವುದಾದರೂ ಕಾರ್ಯಕ್ಕೆ ಕಟ್ಟುಬೀಳು; ನಿರ್ಧಾರಕ ಯಾ ಅಂತಿಮ ಹೆಜ್ಜೆಯನ್ನು ಇಡು.