Romanist ರೋಮನಿಸ್ಟ್‍
ನಾಮವಾಚಕ
  1. ರೋಮನ್‍ ಕ್ಯಾಥೊಲಿಕ್‍ ಮತಕ್ಕೆ ಸೇರಿದವನು ಯಾ ಆ ಮತದ ಸಮರ್ಥಕ.
  2. ರೋಮ್‍ತಜ್ಞ; ಪ್ರಾಚೀನ ರೋಮ್‍ನ ಭಾಷೆ, ಸಂಸ್ಕೃತಿ ಯಾ ನ್ಯಾಯಶಾಸ್ತ್ರದಲ್ಲಿ ಪರಿಣತನಾಗಿರುವವನು.
  3. ‘ರೋಮ್ಯಾನ್ಸ್‍’ ಭಾಷೆಗಳಲ್ಲಿ ಯಾ ಭಾಷಾಶಾಸ್ತ್ರದಲ್ಲಿ ನುರಿತವನು.
  4. ಯೂರೋಪೀಯ ನಾಗರಿಕತೆಯ ಬೆಳವಣಿಗೆಯಲ್ಲಿ ರೋಮನ್‍ ಸಂಸ್ಥೆಗಳ ಪ್ರಭಾವವನ್ನು ಉತ್ಪ್ರೇಕ್ಷೆ ಮಾಡುವ ಇತಿಹಾಸಕಾರ.