Quaker ಕ್ವೇಕರ್‍
ನಾಮವಾಚಕ

ಕ್ವೇಕರ್‍; ಶಾಂತಿ ತತ್ತ್ವಗಳಲ್ಲಿ ನಿಷ್ಠೆಯುಳ್ಳವರೂ, (ಮುಖ್ಯವಾಗಿ ನಸು ಕಂದು ಯಾ ಬೂದು ಬಣ್ಣದ ಬಟ್ಟೆಗಳನ್ನೇ ಉಡುವುದರ ಮೂಲಕ) ಉಡುಪಿನಲ್ಲಿ ಸರಳರೂ, youಗೆ ಬದಲು thou ಬಳ\-ಸುವುದು, ಬಿರುದುಗಳು ಹಾಗೂ ಇತರ ಗೌರವಾಂಕಿತಗಳನ್ನು ಬಳಸದಿರುವುದು, ಪ್ರಾಚೀನ ಪಾಷಂಡ ಧರ್ಮಗಳ ವಾಸನೆಯಿದೆಯೆಂಬ ಕಾರಣ ವಾರದ ದಿನಗಳ ಹೆಸರುಗಳನ್ನು ಹೇಳದಿರುವುದು ಮೊದಲಾದ ಲಕ್ಷಣಗಳಿಂದ ಕೂಡಿದವರೂ, ಧಾರ್ಮಿಕ ಸಂಸ್ಕಾರಗಳು, ದೀಕ್ಷೆವಹಿಸಿದ ಪುರೋಹಿತರು ಮತ್ತು ಸಾಂಪ್ರದಾಯಿಕ ಸಿದ್ಧಾಂತಗಳನ್ನು ಒಪ್ಪದ, 1648-50ರಲ್ಲಿ ಜಾರ್ಜ್‍ ಹಾಕ್ಸ್‍ ಎಂಬಾತನು ಸ್ಥಾಪಿಸಿದ ‘ಸೊಸೈಟಿ ಆಹ್‍ ಹ್ರೆಂಡ್ಸ್‍’ ಎಂಬ ಕ್ರೈಸ್ತ ಮಿತ್ರ ಮಂಡಲಿಗೆ ಸೇರಿದವನು.