Orion ಆ(ಓ)ರೈಅನ್‍
ನಾಮವಾಚಕ

(ಖಗೋಳ ವಿಜ್ಞಾನ) ಮಹಾವ್ಯಾಧ; ಓರಿಯನ್‍; ನಡುಪಟ್ಟಿ ಮತ್ತು ಕತ್ತಿಗಳನ್ನುಳ್ಳ ಬೇಟೆಗಾರನ ಆಕೃತಿಗೆ ಹೋಲಿಸಲಾದ, ರಾಶಿ ಚಕ್ರಕ್ಕೆ ಸ್ವಲ್ಪ ದಕ್ಷಿಣದಲ್ಲಿರುವ, ಮೃಗಶಿರ ನಕ್ಷತ್ರವನ್ನೊಳಗೊಂಡ ಉಜ್ವಲ ತಾರಾಪುಂಜ.

ಪದಗುಚ್ಛ
  1. Orion’s belt ಓರಿಯನ್‍ ಡಾಬು, ಒಡ್ಯಾಣ, ನಡುಪಟ್ಟಿ; ಓರಿಯನ್‍ನಲ್ಲಿ (ನಡುಪಟ್ಟಿಯಂತೆ) ಅಡ್ಡಸಾಲಾಗಿರುವ ಮೂರು ಉಜ್ವಲ ತಾರೆಗಳು.
  2. Orion’s hound ಸಿರಿಯಸ್‍ (ನಕ್ಷತ್ರ); ಲುಬ್ಧಕ; ಓರಿಯನ್‍ ನಕ್ಷತ್ರ ಪುಂಜದಲ್ಲಿನ ಅತ್ಯಂತ ಪ್ರಕಾಶಮಾನವಾದ ಒಂದು ನಕ್ಷತ್ರ.