Olympiad ಆಲಿಂಪಿಆಡ್‍
ನಾಮವಾಚಕ
    1. ಒಲಿಂಪಿಕ್‍ ಶಕ; ಪುರಾತನ ಗ್ರೀಕರು ಕಾಲಗಣನೆಗಾಗಿ ಬಳಸುತ್ತಿದ್ದ, ಎರಡು ಒಲಿಂಪಿಕ್‍ ಪಂದ್ಯಗಳ ನಡುವಣ ನಾಲ್ಕು ವರ್ಷಗಳ ಅಂತರ. (ಒಲಿಂಪಿಕ್‍ ಪಂದ್ಯಗಳ ಮೊದಲನೆಯ ವರ್ಷ ಕ್ರಿಸ್ತಪೂರ್ವ 776, ಇಲ್ಲಿಂದ ಕಾಲಗಣನೆ).
    2. ನಾಲ್ಕು ವರ್ಷಕ್ಕೊಮ್ಮೆ ನಡೆಸುತ್ತಿದ್ದ ಪ್ರಾಚೀನ ಒಲಿಂಪಿಕ್‍ ಪಂದ್ಯಗಳ ಆಚರಣೆ.
  1. ಒಲಿಂಪಿಕ್‍ ಪಂದ್ಯಗಳ ಆಧುನಿಕ ಆಚರಣೆ.
  2. ನಿಯತವಾಗಿ ನಡೆಸುವ ಚದುರಂಗ ಮೊದಲಾದ ಆಟಗಳ ಅಂತರಾಷ್ಟ್ರೀಯ ಪಂದ್ಯ, ಸ್ಪರ್ಧೆ.