OR
ಸಂಕ್ಷಿಪ್ತ
  1. operational research.
  2. (ಅಮೆರಿಕನ್‍ ಪ್ರಯೋಗ) Oregon.
  3. other ranks.
See also 2or  3or  4or
1or ಆರ್‍
ನಾಮವಾಚಕ

(ವಂಶಲಾಂಛನ ವಿದ್ಯೆ) ವಂಶಲಾಂಛನದಲ್ಲಿ ಹೊಂಬಣ್ಣ ಯಾ ಹಳದಿ ಬಣ್ಣ.

See also 1or  3or  4or
2or ಆರ್‍
ಗುಣವಾಚಕ

(ವಂಶಲಾಂಛನ ವಿದ್ಯೆ) ಹೊಂಬಣ್ಣದ ಯಾ ಹಳದಿಯ: a crescent or ಹೊಂಬಣ್ಣದ ಬಾಲಚಂದ್ರ.

See also 1or  2or  4or
3or ಆರ್‍
ಉಪಸರ್ಗ

(ಬ್ರಿಟಿಷ್‍ ಪ್ರಯೋಗ) (ಪ್ರಾಚೀನ ಪ್ರಯೋಗ) ಮುಂಚೆ; ಮೊದಲು; ಮುನ್ನ (ಈಗ ಮುಖ್ಯವಾಗಿ ಕಾವ್ಯಪ್ರಯೋಗದಲ್ಲಿ or ever, or e’er ಎಂಬಲ್ಲಿ).

See also 1or  2or  3or
4or ಆರ್‍
ಸಂಯೋಜಕಾವ್ಯಯ
  1. ಅಥವಾ; ವಾ; ಯಾ; ಇಲ್ಲ(ವೆ):
    1. ಮೊದಲನೆಯದನ್ನು ಬಿಟ್ಟು ಎಲ್ಲಾ ವಿಕಲ್ಪಗಳನ್ನು ಅಥವಾ ಕೊನೆಯದನ್ನು ಮಾತ್ರ ನಿರೂಪಿಸುವಾಗ: white, black or grey ಬಿಳಿ ಯಾ ಕರಿ ಯಾ ಬೂದು. white or black or grey ಬಿಳಿ, ಕರಿ ಯಾ ಬೂದು.
    2. (ಅನೇಕ ವೇಳೆ either ಜೊತೆಯಲ್ಲಿ) ಉಳಿದಿರುವ ಒಂದೇ ಸಾಧ್ಯತೆಯನ್ನು ಯಾ ಅವಕಾಶವನ್ನು ಸೂಚಿಸುವಾಗ: take it or leave it ತೆಗೋ ಯಾ ಬಿಡು. either come in or go out ಒಳಕ್ಕೆ ಬಾ ಇಲ್ಲವೆ ಹೊರಕ್ಕೆ ಹೋಗು.
    3. (whether ಜೊತೆ) ಪರೋಕ್ಷ ಪ್ರಶ್ನೆಯ ಅಥವಾ ಸಂಭಾವನಾವಾಚಕ ವಾಕ್ಯಖಂಡದ ಎರಡನೆಯ ಭಾಗವನ್ನು ಸೂಚಿಸುವಾಗ: ask him whether he was there or not ಅವನು ಅಲ್ಲಿದ್ದನೇ ಅಥವಾ ಇರಲಿಲ್ಲವೇ ಕೇಳು. must go whether I like or dislike it ನನಗೆ ಇಷ್ಟರವಿರಲಿ ಇಲ್ಲದಿರಲಿ ನಾನು ಹೋಗಲೇ ಬೇಕು.
    4. ಹಿಂದಿನ ಪದ ಮೊದಲಾದವುಗಳ ಸಮಾನಾರ್ಥಕ ಪದವನ್ನೋ ವಿವರಣೆಯನ್ನೋ ನೀಡುವಾಗ: suffered from vertigo or giddiness ವರ್ಟಿಗೋ ಅಥವಾ ತಲೆಸುತ್ತಿನಿಂದ ತೊಂದರೆಪಟ್ಟ.
    5. ತರುವಾಯದ ಮುಖ್ಯ ಯೋಚನೆಯೊಂದನ್ನು ತಿಳಿಸುವಾಗ: he must know or is he bluffing? ಅವನಿಗೆ ಗೊತ್ತಿರಬೇಕು–ಇಲ್ಲ ಸುಮ್ಮನೆ ಬಾಯಿಬಡಿಯುತ್ತಿದ್ದಾನೆಯೇ?
  2. ಇಲ್ಲದಿದ್ದರೆ: run or you will be late ಓಡು ಇಲ್ಲದಿದ್ದರೆ ಕಾಲ ಮೀರುತ್ತದೆ.
  3. (ಕಾವ್ಯಪ್ರಯೋಗ) ಎರಡರಲ್ಲಿ ಪ್ರತಿಯೊಂದೂ; ಒಂದೊಂದೂ: or in the heart or in the head ಹೃದಯದಲ್ಲಿ ಯಾ ತಲೆಯಲ್ಲಿ.
ಪದಗುಚ್ಛ
  1. not A or B ‘ಎ’ ಅಲ್ಲ, ‘ಬಿ’ನೂ ಅಲ್ಲ.
  2. one or two (ಆಡುಮಾತು) ಕೆಲವು; ಒಂದೋ ಎರಡೋ.
  3. or else
    1. ಇಲ್ಲದಿದ್ದರೆ: do it now, or else you will have do to it tomorrow ಈಗ ಮಾಡು, ಇಲ್ಲದಿದ್ದರೆ ನಾಳೆ ಮಾಡಬೇಕಾಗುತ್ತದೆ.
    2. (ಆಡುಮಾತು) ಎಚ್ಚರಿಕೆ ನೀಡುವಾಗ ಯಾ ಬೆದರಿಕೆ ಹಾಕುವಾಗ: hand over the money, or else ಹಣ ತಾ, ಇಲ್ಲದಿದ್ದರೆ (ನೋಡಿಕೊ, ನಿನಗೆ ಅಪಾಯ ಮೊದಲಾದ ಬೆದರಿಕೆ).